ಪೃಕೃತಿಯೊಂದಿಗೆ ಉತ್ತಮ ಸಹಸಂಬಂಧದಿಂದ ಮಾನವನ ಜೀವನ ಸಾರ್ಥಕ: ಓ ಆರ್.ಪ್ರಕಾಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿಯರ ಕಛೇರಿ ಬೈಂದೂರು ಹಾಗೂ ಕ್ಷೇತ್ರ ನಮನ್ವಯಾಧಿಕಾರಿಯವರ ಕಛೇರಿ ಬೈಂದೂರು ಮತ್ತು ರತ್ತುಬ್ಯಾ ಪ್ರೌಢಶಾಲೆ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಇವರ ಸಹಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬೈಂದೂರಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಣೆಗೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್ ಮಾತನಾಡಿ ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ನೀಡಿದೆ ಅದಕ್ಕಾಗಿ ಪ್ರಕೃತಿಗೆ ಸದಾ ಋಣಿಯಾಗಿರಬೇಕು ಅದು ಗಿಡಗಳನ್ನು ನೆಡುವುದರ ಮೂಲಕ ಸಲ್ಲಿಸಬೇಕು ಎಂದರು.

Call us

Call us

ಸಮರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯವರಾದ ಅಬ್ದೂಲ್ ರವೂಪ್ ವಲಯ ಉಪ ಅರಣ್ಯಾಧಿಕಾರಿಯವರಾದ ಸದಾಶಿವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಅಧಿಕ್ಷಕರಾದ ಕೃಷ್ಣಮೂರ್ತಿ ನಾಯಕ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ ದೇವಾಡಿಗ, ಮಾದರಿ ಶಾಲೆ ಬೈಂದೂರಿನ ಪದವೀಧರ ಮುಖೋಪಾಧ್ಯಾಯರಾದ ಜನಾರ್ಧನ ಶಿಕ್ಷಕರಾದ ಗಣಪತಿ ಹೋಬಳಿದಾರ್ ಅರಣ್ಯ ರಕ್ಷಕರಾದ ಸವಿತಾ, ಅರಣ್ಯ ವೀಕ್ಷಕರಾದ ರವಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ರತ್ತುಬ್ಯಾ ಪ್ರೌಢಶಾಲೆಯ ಗ್ರೀನ್ ಲ್ಯಾಂಡ್ ಇಕೋ ಕ್ಲಬ್ ಮಕ್ಕಳಿಂದ ಮತ್ತು ಕಚೇರಿಯ ಸಿಬ್ಬಂದಿಗಳಿಂದ ಕಛೇರಿಯ ಸುತ್ತ ಹಣ್ಣು ಹಾಗೂ ಔಷಧಿಯ ಗಿಡಗಳನ್ನು ನೆಡಲಾಯಿತು.

Call us

Call us

Leave a Reply

Your email address will not be published. Required fields are marked *

3 × one =