ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ಸೆ.20ರಂದು ಲಿಖಿತ ಪರೀಕ್ಷೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಕುರಿತ ಲಿಖಿತ ಪರೀಕ್ಷೆಯು, ಸೆಪ್ಟಂಬರ್ 20 ರಂದು ಜಿಲ್ಲೆಯ, ಪೂರ್ಣಪ್ರಜ್ಞ ಯುನಿವರ್ಸಿಟಿ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ್ರೀ-ಯುನಿವರ್ಸಿಟಿ ಕಾಲೇಜು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಪಿಯು ಕಾಲೇಜು ಉಡುಪಿ(ಎಂ.ಜಿ.ಎಂ), ಮಹಾತ್ಮ ಗಾಂಧೀ ಮೆಮೋರಿಯಲ್ ಯುನಿವರ್ಸಿಟಿ ಕಾಲೇಜು ಉಡುಪಿ(ಎಂ.ಜಿ.ಎಂ), ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ, ವಿದ್ಯೋದಯ ಪ್ರೀ- ಯುನಿವರ್ಸಿಟಿ ಕಾಲೇಜು ವಾದಿರಾಜ ರೋಡ್ ಉಡುಪಿ, ಸರ್ಕಾರಿ ಪ್ರೀ- ಯುನಿವರ್ಸಿಟಿ ಕಾಲೇಜು ಬೋರ್ಡ್ ಹೈಸ್ಕೂಲ್ ಉಡುಪಿ, ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕಲ್ಯಾಣಪುರ ಸಂತೆಕಟ್ಟೆ ಉಡುಪಿ, ಕೆ.ಎಂ.ಸಿ ಇಂಟರ‍್ಯಾಕ್ಟ್ ಹಾಲ್ ನಿಯರ್ ಅನಾಟಮಿ ಹಾಲ್ ಮಣಿಪಾಲ, ಈ 9 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ , ಪ್ರವೇಶ ಪತ್ರ, ಗುರುತಿನ ಚೀಟಿ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ನೀರಿನ ಬಾಟಲಿಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಸೂಚಿಸಿದೆ.

ಲಿಖಿತ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಲಿಖಿತ ಪರೀಕ್ಷೆಯ ಪ್ರವೇಶ ಪತ್ರಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in ನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

four × 2 =