ಪ್ರಕಾಶ್ ಭಟ್ ಅವರಿಗೆ ಉದ್ಯಮರತ್ನ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಪುವಿನಲ್ಲಿ ನಡೆದ ಮೆರುಗು ವಲಯ ವ್ಯವಹಾರ ಸಮಾವೇಶದಲ್ಲಿ ಜೇಸಿಐ ವಲಯ ೧೫ರ ‘ಎ’ ಪ್ರಾಂತ್ಯದ ಪ್ರತಿಷ್ಠಿತ ಉದ್ಯಮರತ್ನ ಪ್ರಶಸ್ತಿಯನ್ನು ಉಪ್ಪುಂದ ನ್ಯೂ ವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಜೆಎಫ್‌ಪಿ ಯು. ಪ್ರಕಾಶ ಭಟ್ ಇವರಿಗೆ ಪ್ರದಾನಿಸಿ ಪುರಸ್ಕರಿಸಲಾಯಿತು.

ಉಪ್ಪುಂದ ಪ್ರಕಾಶ್ ಭಟ್ ಇವರ ಉದ್ಯಮ ಕ್ಷೇತ್ರದಲ್ಲಿನ ಸಾಧನೆ ಮತ್ತು ಬೆಳವಣಿಗೆಯನ್ನು ಗುರುತಿಸಿ ಜೇಸಿಐ ವಲಯ ೧೫ರ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇಸಿಐ ಆಂದೋಲನಕ್ಕೆ ಭಟ್ಟರ ಸಹಭಾಗಿತ್ವ ಮತ್ತು ನೀಡುತ್ತಿರುವ ಸಹಕಾರವನ್ನು ವಲಯಾಧ್ಯಕ್ಷ ಸಂತೋಷ್ ಜಿ. ಶ್ಲಾಘಿಸಿದರು. ಈ ಸಂದರ್ಭ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ. ಸುಕುಮಾರ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ರಾಷ್ಟ್ರೀಯ ತರಬೇತುದಾರ ಡಾ. ಅರವಿಂದ ಕೇದಿಗೆ, ರಾಷ್ಟ್ರೀಯ ಜೇಸಿರೇಟ್ ಸಂಯೋಜಕಿ ರೂಪಾ ಇಂದ್ರಾಳಿ, ವಲಯಾಧಿಕಾರಿ ನರಸಿಂಹ ಹಳಗೇರಿ, ಜೇಸಿಐ ಶಿರೂರು ಘಟಕದ ಅಧ್ಯಕ್ಷ ಅರುಣ್‌ಕುಮಾರ್, ಉಪ್ಪುಂದ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ ಹಗೂ ಇತರ ಪದಾಧಿಕಾರಿಗಳು ಇದ್ದರು.

 

Leave a Reply

Your email address will not be published. Required fields are marked *

18 − 5 =