ಪ್ರಜಾಪ್ರಭುತ್ವದ ಆಶಯಗಳು ಅರ್ಥಪೂರ್ಣ ಚರ್ಚೆಯಲ್ಲಿ ಅಡಗಿದೆ: ಕೋಟ ಶ್ರೀನಿವಾಸ ಪೂಜಾರಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಜಾಪ್ರಭುತ್ವ ಬೇರೆ ಚರ್ಚೆಯಲ್ಲಿದ್ದು, ಆಶಯಗಳ ಪರಿವರ್ತನೆ ಆಗಬೇಕಿದೆ. ಮರಕ್ಕೆ ಬೇರು ಹೇಗೆ ಮುಖ್ಯವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಜಾಪ್ರಭುತ್ವದ ಬೇರುಗಳು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಬಣ್ಣಿಸಿದ್ದಾರೆ.

Call us

Call us

Visit Now

ಕಲಾ ಕ್ಷೇತ್ರ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಪದವಿಪೂರ್ವ ಕಾಲೇಜಿನ ಶ್ರೀ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ವಿಚಾರ ಸಂಕಿರಣ, ಸಂವಾದ ಹಾಗೂ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿ ಶಾಸಕಾಂಗ ಸಭೆಯಲ್ಲಿ ಎಲ್ಲಾ ವಿಷಯಗಳ ಮೇಲೆ ಚರ್ಚೆ ನಡೆದು, ಚಿಂಥನ, ಮಂಥನ ಮೂಲಕ ಮರ್ಧಿಸಿದಾಗ ಮಾತ್ರ ಒಳ್ಳೆಯ ವಿಷಯ ಹೊರ ಬರಲು ಸಾಧ್ಯ ಎಂದು ಹೇಳಿದರು.

Click Here

Click here

Click Here

Call us

Call us

ಮಾಜಿ ವಿಧಾನ ಪರಿಷತ್ ಸಭಾಪತಿ ಸುದರ್ಶನ್ ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ವಿಷಯವಾಗಿ ಮಾತನಾಡಿ ಕರಾವಳಿ ಜನ ಎಲ್ಲರಿಗೂ ಸ್ಪೂರ್ತಿಯಾಗಿದ್ದು, ಬ್ಯಾಂಕಿಂಗ್ ಕ್ಷೇತ್ರ ಮೂಲಕ ಗಮನ ಸೆಳೆದಿದೆ. ಸಾಹಿತ್ಯ, ಧಾರ್ಮಿಕ ಹಾಗೂ ಯಕ್ಷಗಾನ ಮೂಲಕ ಎಲ್ಲಾ ವಿಭಾಗದಲ್ಲಿ ಗಮನ ಸೆಳೆದು ಸಾಕಷ್ಟು ಬೆಳೆಯಲು ಅಕಾಶವಿದ್ದರೂ, ಕೋಮು ಸಂಘರ್ಷ, ಭಿನ್ನಾಭಿಪ್ರಾಯ ನಿರೀಕ್ಷಿತ ಬೆಳವಣಿಗೆ ಆಗಿಲ್ಲ. ಇದನ್ನು ಸರಿಪಡಿಸಿಕೊಂಡರೆ ದಕ ಮತ್ತು ಉಡುಪಿ ಜಿಲ್ಲೆ ವೇಗವಾಗಿ ಬೆಳೆಯಲು ಸಾಧ್ಯ.

ಶಾಸಕಾಂಗ ಕಾರ‍್ಯಾಂಗ, ನ್ಯಾಯಾಂಗ ಮುಖ್ಯ ಆಧಾರ ಸ್ಥಂಭವಾಗಿದ್ದರೂ, ಎಲ್ಲೋ ಆಧಾರ ಸ್ಥಂಭಗಳು ಅದರುವಂತೆ ಭಾಸವಾಗುತ್ತದೆ. ಶಾಸನ ಸಭೆಯಲ್ಲಿ ಆರೋಗ್ಯಕರ ಚರ್ಚೆನಡೆಯುತ್ತಿಲ್ಲ. ಇದಕ್ಕೆ ಆಡಳತ ಮತ್ತು ವಿರೋಧ ಪಕ್ಷಗಳ ಸಮನ್ವಯತೆ ಕೊರತೆ ಕಾರಣ. ಶಾಸನ ಸಭೆ ಶಾಸಕರು ತಮ್ಮ ಜವಾಬ್ದಾರಿ ಪ್ರಮಾಣಿಕಾವಗಿ ನಿಭಾಯಿಸದಿದ್ದರೆ ಶಾಸನ ಸಭೆ ಸಂತೆ ಆಗುತ್ತದೆ. ಬದಲಾವಣೆ ತರುವ ಜವಾಬ್ದಾರಿ ಶಾಸಕರ ಮೇಲಿದೆ. ವಿರೋಧ ಪಕ್ಷ ಹಾಗೂ ಅಡಳಿತ ಪಕ್ಷ ತಮ್ಮ ಜವಾಬ್ದಾರಿ ನಿಭಾಯಿಸುವ ಜೊತೆ ಮತದಾರರು ತಮ್ಮ ಹೊಣೆ ಅರಿತಾಗ ಮಾತ್ರ ಪ್ರಜಾಪ್ರಭುತ್ವಕ್ಕೊಂದು ಅರ್ಥ ಬರುತ್ತದೆ ಎಂದರು.

ವಿರೋಧ ಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ವಿರೋಧ ಪಕ್ಷದ ಜವಾಬ್ದಾರಿಗಳ ಕುರಿತು ಮಾತನಾಡಿ ಆಡಳಿತ ಮತ್ತು ವಿರೋಧ ಪಕ್ಷಗಳು ಸಂವಿಧಾನದ ಎರಡು ಚಕ್ರವಾಗಿದ್ದು, ಸಮಾನ ಚಲಿಸಿದರೆ ಮಾತ್ರ ಶಾಸಕಾಂಗಕ್ಕೊಂದು ಅರ್ಥ ಬರುತ್ತದೆ. ಬಹುಮತ ಇದೆ ಎಂದು ಎಲ್ಲವನ್ನೂ ಆಡಳಿತ ಪಕ್ಷ ವಿರೋಧ ಪಕ್ಷ ಕಡೆಗಣಿಸಿದರೆ ಜನಪರ ಯೋಜನೆ ಬರಲು ಸಾಧ್ಯವಿಲ್ಲ. ಇತ್ತೀಚೆಗೆ ಆಡಳಿತ ಪಕ್ಷ ವಿರೋಧ ಪಕ್ಷದ ಹೊಂದಾಣಿಕೆ ಚರ್ಚೆಗಳು ಆರೋಗ್ಯ ಪೂರ್ಣ ನಡೆಯದೆ ಸಧನ ಮೊಟಕುಗೊಳ್ಳುವ ಮೂಲಕ ಹೊಸ ಶಾಸನಗಳ ರಚನೆಗೆ ತೊಡಕಾಗಿ ಜನ ಕಲ್ಯಾಣಕ್ಕೆ ಹಿನ್ನೆಡೆ ಆಗುತ್ತಿದೆ. ವಿರೋಧ ಪಕ್ಷಗಳು ಸ್ಯಾಡೋ ಕ್ಯಾಬೆನಿಟ್ ರಚನೆ ಮಾಡಿಕೊಂಡು ಆಯಾ ವಿಷಯದ ಮೇಲೆ ಅಧ್ಯಯನ ನಡೆಸಿ ಸರ್ಮಥವಾಗಿ ಚರ್ಚೆ ನಡೆಸಿದರೆ ಪ್ರಜಾಹಿತ ಸಾಧ್ಯ. ಹಗರಣ ಬಯಲಿಗೆಳೆಯುವುದೊಂದೇ ವಿರೋಧ ಪಕ್ಷದ ಕೆಲಸವಲ್ಲ. ಆಡಳಿತ ಪಕ್ಷ ವಿರೋಧ ಪಕ್ಷದ ಅಭಿಪ್ರಾಯಕ್ಕೂ ಬೆಲೆ ಕೊಡಬೇಕು ಎಂದರು.

ಕಡೂರು ಕ್ಷೇತ್ರದ ಶಾಸಕ ವೈಎಸ್‌ವಿ ದತ್ತ ಸದನದ ಕರ್ತವ್ಯಗಳ ಪ್ರಾಮುಖ್ಯತೆ ಕುರಿತು ಮಾತನಾಡಿ ಶಾಸಕರಿಗೆ ತನ್ನ ಅಧಿಕಾರಿದ ಪರಿಧಿ ಇತಿಮಿತಿ ಲಕ್ಷ್ಮಣ ರೇಖೆ ಒಳಗೆ ಕೆಲಸ ಮಾಡಿಬೇಕು. ಶಾಸಕರ ಜವಾಬ್ದಾರಿ ಮರು ವ್ಯಾಖ್ಯಾನದ ಜರೂರತ್ತಿದೆ. ಸಭೆಯಲ್ಲಿ ಲವಲವಿಕೆ ಚರ್ಚೆ ಆಗಿಬೇಕಿದ್ದರೆ ಶಾಸಕರು ಅಧ್ಯಯನ ಶೀಲರಾಗಿರಬೇಕು. ಶಾಸಕಾಂಗ ಸಭೆಯಲ್ಲಿ ಸಭೆಯಲ್ಲಿ ಭಾವಿಗೆ ಇಳಿಯೋದು ಕಿರಿಚೋದೆ ಇಂದಿನ ಶಾಸಕರ ಮಾನದಂಡ ಅಳೆಯುವ ಅಳತೆಗೋಲಾಗಬಾರದು. ಮಾಧ್ಯಮ ಕೂಡಾ ಎಷ್ಟು ಸಲ ಬಾವಿಗಿಳಿದ, ಎಷ್ಟು ಬಾರಿ ದೊಡ್ಡಸ್ವರದಲ್ಲಿ ಮಾತನಾಡಿದೆ ಎನ್ನೋದರಲ್ಲೇ ಕೇಂದ್ರೀಕೃತವಾಗುತ್ತದೆ. ಪ್ರಸಕ್ತ ಶಾಸಕಾಂಗ ಸಭೆಯಲ್ಲಿ ಗುಣಮಟ್ಟ ಕುಸಿಯುತ್ತದೆ. ಶಾಸಕಾಂಗದಲ್ಲಿ ಕಾರ‍್ಯಾಂಗಕ್ಕೆ ಲೂಪ್ ಹೋಲ್ ಸಿಗಂತೆ ಎಚ್ಚರಿಕೆ ವಹಿಸಿ ಶಾಸನಗಳ ರಚನೆಯಾದಾಗ ಮಾತ್ರ ಅರ್ಥ ಬರುತ್ತದೆ. ಪ್ರಚಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಿಗಿರುವಷ್ಟೇ ಜವಾಬ್ದಾರಿ ಮತದಾರರಿಗೂ ಇರುತ್ತದೆ. ಅವರವರ ಜವಾಬ್ದಾರಿ ನಿಭಾಯಿಸಿದರೆ ಉತ್ತಮ ಶಾಸನಗಳು ಬರಲು ಸಾಧ್ಯ ಎಂದರು.

ಕಲಾ ಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಸಂವಹನಕಾರಾಗಿದ್ದರು. ಮಾಲಿನಿ ಸತೀಶ್ ನಿರೂಪಿಸಿದರು. ನಂತರ ಬೈಂದೂರು ಲಾವಣ್ಯ ಕಲಾವಿದರಿಂದ ಮರಣಮೃದಂಗ ನಾಟಕ ನಡೆಯಿತು.

Leave a Reply

Your email address will not be published. Required fields are marked *

19 + 17 =