ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ರೋಟರಿಯ ಗುರಿ : ಭರತೇಶ್ ಅಧಿರಾಜ್

Call us

Call us

Call us

Call us

ಬಸ್ರೂರು: ರೋಟರಿ ಸನರೈಸ್‌ನಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆ

Call us

Click Here

Click here

Click Here

Call us

Visit Now

Click here

ಕುಂದಾಪುರ: ಆಧುನಿಕ ಜಗತ್ತು ನಾಗಲೋಟದಲ್ಲಿ ಸಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕಲಿಕೆಯ ವ್ಯವಸ್ಥೆಯು ಉತ್ತಮಗೊಳ್ಳ ಬೇಕೆಂಬ ನಿಟ್ಟಿನಲ್ಲಿ ರೋಟರಿ ಕ್ಲಬ್ ಸಾಕ್ಷರತಾ ಯೋಜನೆಯಡಿ ಶಾಲೆಗಳಲ್ಲಿ ಇ-ಲರ್ನಿಂಗ್ ಕಿಟ್‌ನ್ನು ಅಳವಡಿಸಿ ಗುಣಮಟ್ಟದ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವುದು ನಮ್ಮ ಆಶಯ ಆದುದರಿಂದ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲಿ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಹೇಳಿದರು.

ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಸಂದರ್ಭ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಗೆ ಅಳವಡಿಸಿದ ಇ-ಲರ್ನಿಂಗ್ ಸ್ಮಾರ್ಟ್ ಕ್ಲಾಸ್‌ನ್ನು ಉದ್ಘಾಟಿಸಿ ಮಾತನಾಡಿದರು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಭಾರತವನ್ನು ಪಿಡುಗಾಗಿ ಕಾಡಿದ ಪಲ್ಸ್ ಪೋಲಿಯೋವನ್ನು ಭಾರತ ಮುಕ್ತಗೊಳಿಸುವಲ್ಲಿ ರೋಟರಿ ಕ್ಲಬ್ ಯಶಸ್ಸನ್ನು ಕಂಡಿದ್ದು, ಇದೀಗ ಶಿಕ್ಷಣ ಕ್ಷೇತ್ರದಲ್ಲಿ ದೇಶದಾಧ್ಯಂತ ಸಾಕ್ಷರತೆ ಸೃಷ್ಠಿಸುವ ಪ್ರಯತ್ನದ ಜೊತೆಗೆ ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಕಾರ್ಯಚಟುವಟಿಕೆಯನ್ನು ಪ್ರಶಂಸಿಸಿದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ದಿನಕರ ಪಟೇಲ್, ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ, ನಿವೇದಿತಾ ಫ್ರೌಢ ಶಾಲೆಯ ಮುಖ್ಯ ಶಿಕ್ಷಕ ದಿನಕರ ಆರ್. ಶೆಟ್ಟಿ, ರೋಟರಿ ಜತೆ ಕಾರ್ಯದರ್ಶಿ ಗಣೇಶ್ ಸಿ. ಎಚ್., ರೋಟರಿ ಸದಸ್ಯರಾದ ನರಸಿಂಹ ಹೊಳ್ಳ, ಪ್ರಕಾಶ್ಚಂದ್ರ ಹೆಗ್ಡೆ, ರಾಜು ಪೂಜಾರಿ, ಬಿ. ಎಮ್. ಚಂದ್ರಶೇಖರ, ಸದಾನಂದ ಉಡುಪ, ಕೆ.ಎಚ್. ಚಂದ್ರಶೇಖರ, ಉಲ್ಲಾಸ್ ಕ್ರಾಸ್ತಾ, ರಾಮಕೃಷ್ಣ ಐತಾಳ್, ಶಿವಾನಂದ ಎಂ. ಪಿ. ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

1 × four =