ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯ ಮುಜುರಾಯಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸಾಮೂಹಿಕ ವಿವಾಹದ ಸಪ್ತಪದಿ ಯೋಜನೆ ಪ್ರತಿ ತಿಂಗಳು ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಪ್ತಪದಿ ರಾಜ್ಯಸರ್ಕಾರದ ಬಹುದೊಡ್ಡ ಯೋಜನೆ ಕೋವಿಡ್ ಕಾರಣಕ್ಕೆ ಯೋಜನೆಯಲ್ಲಿ ನಿಲುಗಡೆಯಾಗಿತ್ತು. ರಾಜ್ಯದಲ್ಲಿ 23 ಮಂದಿಗೆ ವಿವಾಹ ಮಾಡಿಸುವ ಕೆಲಸ ಆಗಿದೆ. ಚಿನ್ನದ ಟೆಂಡರ್ ಹಾಕಲು ಯಾರೂ ಮುಂದೆ ಬಂದಿರಲಿಲ್ಲ. ಕಾವೇರಿ ಎಂಪೋರಿಯಂ ಮೂಲಕ ಚಿನ್ನ ಖರೀದಿ ಮಾಡುತ್ತೇವೆ. ಪ್ರತಿ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗುತ್ತದೆ. ಆರ್ಥಿಕ ಸಮಸ್ಯೆ ಇರುವವರ ಪಾಲಿಗೆ ಸಪ್ತಪದಿ ಯೋಜನೆ ವರದಾನವಾಗಲಿದೆ ಎಂದರು.