ಬೈಂದೂರು: ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಘಟಕ ಕುಂದಾಪುರ ಮತ್ತು ಬೈಂದೂರು ಇವರ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಯಕರ ಶೆಟ್ಟಿ, ಅಧ್ಯಕ್ಷರು, ಭಾರತೀಯ ರೆಡ್‌ಕ್ರಾಸ್ ಘಟಕ ಕುಂದಾಪುರ ಇವರು ರೆಡ್‌ಕ್ರಾಸ್ ಸಂಸ್ಥೆಯ ಮೂಲಭೂತ ತತ್ವಗಳಾದ ಮಾನವೀಯತೆ, ಪಕ್ಷಪಾತರಾಹಿತ್ಯ, ತಾಟಸ್ಥ್ಯ, ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ ಮತ್ತು ವಿಶ್ವವ್ಯಾಪಕತೆ ಮತ್ತು ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಡಾ. ಸೋನಿ ಡಿಕೋಸ್ಟಾ, ಅಮೃತೇಶ್ವರಿ ಆಯುರ್ವೇದಿಕ್ ಕಾಲೇಜು, ಕುಂದಾಪುರ ಇವರು ಬೆಂಕಿ ಅನಾಹುತ, ರಕ್ತಸ್ರಾವ, ನೀರಿನ ಅವಘಡ ತುರ್ತಾಗಿ ಮಾಡಬೇಕಾದ ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ಮತ್ತು ಹಾಗೂ ಬಹುಮುಖ್ಯವಾಗಿ ಹೃದಯಾಘಾತದ ಸಂದರ್ಭದಲ್ಲಿ ಮಾಡಬೇಕಾದ ಸಿ.ಪಿ.ಆರ್. ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

ಡಾ. ಕೀರ್ತಿ ಪಾಲನ್ ಪ್ರಥಮ ಚಿಕಿತ್ಸೆ ತರಬೇತುದಾರರು, ರೆಡ್‌ಕ್ರಾಸ್ ಸಂಸ್ಥೆ, ಉಡುಪಿ. ಇವರು, ಮೂಳೆ ಮುರಿತದ ನಿರ್ವಹಣೆ ಮತ್ತು ಬ್ಯಾಂಡೇಜ್ ಮಾಡುವ ವಿಧಾನ, ರಕ್ತಸ್ರಾವ ಆಗದಂತೆ ತಡೆಗಟ್ಟುವ ವಿಧಾನಗಳು ಹಾಗೂ ಅನುಸರಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಸ್ತೃತವಾಗಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕರವರು ಪ್ರಥಮ ಚಿಕಿತ್ಸೆಯ ಸರಿಯಾದ ಮಾಹಿತಿಯಿದ್ದಲ್ಲಿ ಜೀವಹಾನಿ ಆಗುವುದನ್ನು ತಪ್ಪಿಸಲು ಸಾಧ್ಯವಿದೆ. ಇಂತಹ ಕಾರ್ಯಾಗಾರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ ಅದು ಸಮಾಜಕ್ಕೂ ಕೊಡುಗೆಯಾಗುತ್ತದೆ ಎಂದರು.

ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ ಧನಲಕ್ಷ್ಮಿ ನಿರೂಪಿಸಿದರೆ, ಭಾಗ್ಯ ಸ್ವಾಗತಿಸಿದರು. ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಶಿವಕುಮಾರ ಪಿವಿ ಅವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕರಾದ ನವೀನ್‌ಕುಮಾರ್ ವಂದಿಸಿದರು. ವಂದಿಸಿದರು. ಕಾರ್ಯಕ್ರಮದಲ್ಲಿ ಶಿವರಾಮ್ ಶೆಟ್ಟಿ, ಖಜಾಂಚಿಗಳು, ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ, ನಿತಿನ್ ಶೆಟ್ಟಿ, ಸಭಾಪತಿಗಳು ರೆಡ್‌ಕ್ರಾಸ್ ಸಂಸ್ಥೆ, ಬೈಂದೂರು. ಸಂತೋಷ್ ರೆಡ್‌ಕ್ರಾಸ್ ಸಂಸ್ಥೆ ಬೈಂದೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

sixteen − 13 =