ಪ್ರವೀಣ್ ಬಿ. ಶೆಟ್ಟಿ ಬೈಂದೂರು ಅವರಿಗೆ ‘ಸಂಗೀತ ಚೂಡಾಮಣಿ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೀದರ್ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಹಾಗೂ ಬೆಂಗಳೂರಿನ ಕವಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ನಡೆದ ಕವಿ ಕೆ.ಪುಂಡಲೀಕ ನಾಯಕ ಅವರ ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರವೀಣ್ ಬಿ. ಶೆಟ್ಟಿ ಬೈಂದೂರು ಅವರಿಗೆ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೀದರ್ ವತಿಯಿಂದ ರಾಜ್ಯ ಮಟ್ಟದ  ‘ಸಂಗೀತ ಚೂಡಾಮಣಿ ರತ್ನ ರಾಜ್ಯ ಪ್ರಶಸ್ತಿ’ನೀಡಿ ಗೌರವಿಸಲಾಯಿತು.

Call us

Call us

Call us

ಡಾ| ಎಂ.ಜಿ.ದೇಶಪಾಂಡೆಯವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎ.ಎಸ್. ಎನ್ ಹೆಬ್ಬಾರ್,ಎಸ್ ಪ್ರಕಾಶ್ಚಂದ್ರ ಶೆಟ್ಟಿ, ಬೆಳಗೋಡು ರಮೇಶ್ ಭಟ್ಟ್, ಡಾ. ಪಾರ್ವತಿ ಜಿ.ಐತಾಳ್, ಪ್ರೋ. ಉಪೇಂದ್ರ ಸೋಮಯಾಜಿ, ಎಸ್.ಜನಾರ್ದನ ಮರವಂತೆ, ಓಂ ಗಣೇಶ್ ಉಪ್ಪುಂದ, ಯ.ಎಸ್ ಶೆಣೈ, ಕೆ.ಪುಂಡಲೀಕ ನಾಯಕ್ ಉಪಸ್ಥಿತಿತರಿದ್ದರು.

Call us

Call us

ಅವರು ಪ್ರಸ್ತುತ ಪ್ರತಿಷ್ಟಿತ ಅಮೇರಿಕನ್ ಕಂಪೆನಿ ಒರಾಕಲ್ ಕಾರ್ಪೊರೇಶನ್ ನಲ್ಲಿ ಸೀನಿಯರ್ ಕ್ಲೌಡ್ ಆರ್ಕಿಟೆಕ್ಟ್ ಆಗಿದ್ದು ಸಾಹಿತ್ಯ ರಚನೆ , ಗಾಯನ , ಕನ್ನಡ , ತಮಿಳು ಕಿರುಚಿತ್ರಗಳಿಗೆ ಸಂಗೀತ ಸಂಯೋಜನೆಯ ಜೊತೆಗೆ “ತುಂಬಿ ತುಳುಕಿದ ಸಾಲು” ಅನ್ನುವ ಕವನ ಸಂಕಲನ ಬಿಡುಗಡೆಯನ್ನು ಮಾಡಿದ್ದಾರೆ. ಹಾಡುವಲ್ಲಿ ವಿಶೇಷ ಆಸಕ್ತಿ ಇರುವ ಅವರು ಹಲವಾರು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಈ ಮೊದಲು ಗಳಿಸಿರುತ್ತಾರೆ., ವಿವಿಧ ಕಲಾ ಪ್ರವ್ರತ್ತಿಗಳೊಡನೆ ಸಮತೋಲನವನ್ನು ಕಾಪಾಡಿಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *

3 × five =