ಪ್ರಶಂಸೆಗೆ ಪಾತ್ರವಾದ ಇಷ್ಟಾರ್ಥ ಪ್ರೊಡಕ್ಷನ್ಸ್ ಮೊದಲ ಪ್ರಯತ್ನ ‘ಕಲ್ಮಶ’ ಕಿರುಚಿತ್ರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಟನೆಯಿಂದ ನಿರ್ದೇಶನದ ತನಕ ಮೊದಲ ಬಾರಿಗೆ ಹೊಸ ಪ್ರತಿಭೆಗಳು ಪರಿಚಯಿಸಿಕೊಂಡು ನಿರ್ಮಾಣ ಮಾಡಿರುವ ‘ಕಲ್ಮಶ’ ಕಿರುಚಿತ್ರ ಈಗ ಎಲ್ಲಡೆ ಸದ್ದು ಮಾಡುತ್ತಿದೆ. ಹೊಸಬರ ತಂಡವಾದ ‘ಇಷ್ಟಾರ್ಥ ಪ್ರೊಡಕ್ಷನ್’ ಅವರ ಮೊದಲ ಪ್ರಯತ್ನ ಎಲ್ಲರ ಮನ ಗೆದ್ದಿದೆ.

Click here

Click Here

Call us

Call us

Visit Now

Call us

Call us

ಗೆಳೆತನದ ನಡುವೆ ಸ್ವಾರ್ಥ ಎಂಬುದು ಬಂದಾಗ ಏನಾಗಬಹುದು ಎಂಬುದನ್ನ ಎಳೆಯಾಗಿ ಇಟ್ಟುಕೊಂಡು ಮಾಡಿರುವ ಚಿತ್ರ, ಪ್ರೇಕ್ಷಕರ ಕುತೂಹಲಕ್ಕೆ ಕೊನೆತನಕ ತಿರುವುಗಳು ನೀಡುತ್ತ, ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನವನ್ನು ಪ್ರಸಾದ್ ನೆಲ್ಲಿಕಟ್ಟೆ ಉತ್ತಮವಾಗಿ ನಿರ್ವಹಿಸಿದ್ದಾರೆ. ಸಹ ನಿರ್ದೇಶನ ಮಾಡಿರುವ ಪ್ರದೀಪ್ ಮೊಗವೀರ ಗುಡಿಬೆಟ್ಟು, ಪ್ರೇಕ್ಷಕರಿಗೆ ಕಥೆಯ ಸಾರಾಂಶವನ್ನು ಸೂಕ್ಷ್ಮವಾಗಿ ತಿಳಿಯುವಂತೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಹೊಸ ಪ್ರತಿಭೆಗಳ ನಟನೆಯನ್ನು ಬಹಳಷ್ಟು ಅಚ್ಚುಕಟ್ಟಾಗಿ ಸೆರೆ ಹಿಡಿಯುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಛಾಯಾಗ್ರಹಣಕ್ಕೆ ಕಾಲಿಟ್ಟ ಶಾಶ್ವತ್ ಎಸ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಇಂಟ್ರೋ ಎಡಿಟಿಂಗ್ ಹಾಗೂ ಹಿನ್ನೆಲೆ ಸಂಗೀತವನ್ನು ಕೆ. ಕ್ರಿಯೆಶನ್ಸ್ ಉತ್ತಮವಾಗಿ ನೀಡಿದ್ದಾರೆ. ಮತ್ತು ಅಜಿತ್ ಮೇಲ್ ಬೈಲ್ ಅವರ ಸಹಕಾರ ಈ ಚಿತ್ರಕ್ಕೆ ಇದೆ.

ಮುಖ್ಯ ಭೂಮಿಕೆಯಲ್ಲಿ ಗಣೇಶ್ ಕಿಣಿ, ಲಾವಣ್ಯ, ಪಂಚಮಿ, ಮೋಹನ್ ಅಂಪಾರು, ಸುಕುಮಾರ್ ಮೇಲ್ ಬೈಲ್, ಗಣೇಶ್ ಮೇಲ್ ಬೈಲ್, ಭುವನ್ ಶೇಟ್, ಪ್ರಭಾಕರ್ ನೆಲ್ಲಿಕಟ್ಟೆ, ವಿಶ್ವನಾಥ್, ನಾಗರಾಜ್, ದಿನೇಶ್ ಮುಳ್ಳುಗುಡ್ಡೆ, ಪ್ರೀತೇಶ್, ಮಯೂರ್, ಸುಶಾಂತ್ ಹಾಗೂ ಇನ್ನಿತರರು ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

three × five =