ಪ್ರಶಸ್ತಿ ಹಿಂದಿರುಗಿಸದವರು ನಿಷ್ಟ್ರೀಯರಲ್ಲ: ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ

Call us

ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ

Call us

Call us

ಮೂಡುಬಿದಿರೆ: ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ಪಾವಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಾಸು ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆವೇಶದಲ್ಲಿ, ಪೂರ್ವಾಪರವನ್ನಿಟ್ಟುಕೊಂಡು ನಡೆಸುತ್ತಿರುವ ಪ್ರಶಸ್ತಿ ವಾಪಾಸಾತಿ ಸಮೂಹ ಸನ್ನಿಯಾಂತಾಗಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರೀಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ.  ಇದು ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸ್ಪಷ್ಟ ನುಡಿ.

ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮಾಜವನ್ನು ಸನ್ಯಾರ್ಗದಲ್ಲಿ ಕೊಂಡೊಯ್ಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದನ್ನು ತಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದು ಎಂದರು.

Call us

Call us

ಪರಿಷತ್ ನಡೆಸುವ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಬಯಕೆ ಇತ್ತೆ ಎಂಬ ಪ್ರಶ್ನೆಗೆ, ಅಧ್ಯಕ್ಷನಾಗುವ ವಿಚಾರದಲ್ಲಿ ತನಗೆ ಆಸಕ್ತಿ ಇಲ್ಲ. ಕಳೆದ ಬಾರಿ ತನ್ನ ಹೆಸರು ಕೇಳಿ ಬಂದದ್ದು ಹೌದಾದರೂ ಅದು ಅಭಿಮಾನಿಗಳ ಅಭಿಪ್ರಾಯವಾತ್ತೇ ಹೊರತು ವೈಯಕ್ತಿಕ ಲಾಭಿ ಮಾಡಿಲ್ಲ. ಈ ವಯಸ್ಸಿನಲ್ಲಿ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಅಗತ್ಯವೂ ತನಗಿಲ್ಲ ಎಂದ ಅವರು, ನುಡಿಸಿರಿಯ ಅಧ್ಯಕ್ಷತೆ ವಹಿಸಿರುವುದು ಖುಷಿ ನೀಡಿದೆ. ನುಡಿಸಿರಿಯಲ್ಲಿನ ವೈವಿಧ್ಯ, ಸಂಭ್ರಮ ಹಾಗೂ ಜನರ ಪಾಲ್ಗೊಳ್ಳುವಿಕೆ ವಿಶೇಷವಾದುದು ಎಂದರು.

ಸಾಹಿತಿಗಳು ರಾಜಕಾರಣ, ಇನ್ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಾಹಿತಿಗಳು ಸಮಾಜದ ಹಿತ ಕಾಯಬೇಕು. ನಮ್ಮ ಸಾಹಿತ್ಯ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಹೇಳುವುದನ್ನು ಸಹಾನುಭೂತಿಯಿಂದ ಹೇಳಿದರೆ ಎಲ್ಲರೂ ಕೇಳುತ್ತಾರೆ. ಬದಲಿಗೆ ಪೂರ್ವಾಪರವನ್ನಿಟ್ಟಕೊಂಡು ಯಾರನ್ನೋ ದೂಷಿಸುವುದು ಸರಿಯಲ್ಲ ಎಂದ ಅವರು ಮಹಾದಾಯಿ ನೀರಾವರಿ ಯೋಜನೆಯ ವಿಚಾರದಲ್ಲಿ ಸ್ಪಷ್ಟವಾದ ಜಲನೀತಿ ಅನುಷ್ಠಾನಕ್ಕೆ ಬರುವುದರೊಂದಿಗೆ ಪರಿಸರ ತಜ್ಞರು, ರಾಜಕಾರಣಿಗಳು ಹಾಗೂ ಸ್ಥಳೀಯ ಹಿತಾಸಕ್ತಿಗಳನ್ನು ಒಗ್ಗೂಡಿಸಿಕೊಂಡು ಸಮಸ್ಯೆಗೊ೦ದು ಪರಿಹಾರ ದೊರಕಿಸಿಕೊಡಬೇಕಿದೆ.

ಕನ್ನಡ ಸಾಹಿತ್ಯವನ್ನು ಕನ್ನಡದಲ್ಲಿಯೇ ಓದುವಾಗಿರು ಜೀವಧ್ವನಿ ಇಂಗ್ಲಿಷ್ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಇರಲು ಸಾಧ್ಯವಿಲ್ಲ. ನಗರೀಕರಣದ ಕನ್ನಡದಿಂದಾಗಿ ನೈಜ ಕನ್ನಡವೆನ್ನುವುದು ಸತ್ತು ಹೋಗಿದೆ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಅನುಷ್ಠಾನವಾಗಬೇಕಿದೆ.

ಸಂವಾದದಲ್ಲಿ ಡಾ. ಮೌಲ್ಯ ಜೀವನರಾಮ್, ಶ್ರೀನಿವಾಸ ಪೇಜತ್ತಾಯ ಉಪಸ್ಥಿತರಿದ್ದರು.DSC_1064

Leave a Reply

Your email address will not be published. Required fields are marked *

four × four =