ಪ್ರಾಕೃತಿಕ ವಿಕೋಪ ತಡೆಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಿಸಲು ಡಾ. ಎಸ್.ಎನ್.ಪಡಿಯಾರ್ ಕರೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಸಹಕಾರಿ ಎಂಬ ಕುರಿತು 2004 ರಿಂದ 2006 ರವರೆಗೆ ಉಡುಪಿ ಜಿಲ್ಲೆ, ಉತ್ತರಕನ್ನಡ ಜಿಲ್ಲೆ, ಗೋವಾ ರಾಜ್ಯದಲ್ಲಿ ನಡೆಸಿದ ಪ್ರಯೋಗದ ಸತ್ಪರಿಣಾಮವಾಗಿ ಕಳೆದೊಂದು ದಶಕಗಳಿಂದ ಕಡಲ್ಕೊರೆತ ನಿಯಂತ್ರಣಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ. ಆದುದರಿಂದ ಈಗಾಗಲೇ ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವವರು ಹಾಗೂ ಕಾರಣಾಂತರಗಳಿಂದ ನಿಲ್ಲಿಸಿದವರೂ ಪ್ರಾಕೃತಿಕ ಸಮತೋಲನಕ್ಕಾಗಿ ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣವನ್ನು ಮುಂದುವರಿಸಿಕೊಂಡು ಹೋಗುವಂತೆ ಪಶ್ಚಿಮ ಕರಾವಳಿಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯ ನಿರ್ದೇಶಕರಾದ ಡಾ.ಎಸ್.ಎನ್. ಪಡಿಯಾರ್ ಕರೆ ನೀಡಿದ್ದಾರೆ.

Call us

Call us

Click Here

Visit Now

2005 ರಲ್ಲಿ ಪಶ್ಚಿಮ ಕರಾವಳಿಯ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ಪಠಣ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಬೃಹತ್ ಅಭಿಯಾನವನ್ನು ಸಂಘಟಿಸಿತ್ತು. ತನ್ಮೂಲಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದ ಅವಶ್ಯಕತೆಯನ್ನು ಜನಸಾಮಾನ್ಯರಿಗೆ ಮನಗಾಣಿಸಿ, ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವಂತೆ ಪ್ರೇರೇಪಿಸಲಾಗಿತ್ತು. ಇದರ ಸತ್ಪರಿಣಾಮವನ್ನು ಜನಸಾಮಾನ್ಯರು ಗುರುತಿಸಿದ್ದಾರೆ. ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪದ ಶಾಶ್ವತ ನಿವಾರಣೆಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಹಕಾರಿ. ಒಂದು ರೂಪಾಯಿಯೂ ಖರ್ಚಿಲ್ಲದೇ ನಡೆಸಬಹುದಾದ ಈ ಕಾರ್ಯದಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುವುದನ್ನು ತಪ್ಪಿಸಬಹುದು. ಒಂದು ತರಂಗದಿಂದ ಇನ್ನೊಂದು ತರಂಗವನ್ನು ತಡೆಯಬಹುದೆನ್ನುವುದು ವಿಜ್ಞಾನ ಒಪ್ಪುವ ಸತ್ಯ. ಹಾಗೇ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಉಂಟಾಗುವ ಶಬ್ಧ ತರಂಗಕ್ಕೆ ಅದ್ಭುತ ಚೈತನ್ಯವಿದ್ದು. ಈ ಶಬ್ಧ ತರಂಗಕ್ಕೆ ವಾಯು ಹಾಗೂ ಜಲ ತರಂಗವನ್ನು ಶಾಂತಗೊಳಿಸುವ ಶಕ್ತಿಯಿದೆ ಆದುದರಿಂದ ಕಡಲ್ಕೊರೆತದಂತಹ ಅಪಾಯವನ್ನು ತಪ್ಪಿಸಬಹುದಾಗಿದೆ.

Click here

Click Here

Call us

Call us

ಈ ಹಿಂದೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯಿಂದ 6,200ಕ್ಕೂ ಅಧಿಕ ಮನೆಗಳ ಸಂಪರ್ಕಗೈದು ಸ್ತೋತ್ರ ಪಠಣ ಮಾಡಲಾಗಿತ್ತು. ಮನೆಗೊಂದರಂತೆ 30,000 ಸ್ತೋತ್ರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗಿದ್ದು, 16 ದಿನಗಳ ಕರಾವಳಿ ಯಾತ್ರೆಯಲ್ಲಿ ಹೆಜಮಾಡಿ-ಕೋಡಿ, ಎರ್ಮಾಳ್ ತೆಂಕ, ಕಾಪು, ಕಟಪಾಡಿ, ಉಡುಪಿ, ಮಲ್ಪೆ, ಸಾಲಿಗ್ರಾಮ-ಕೋಡಿಕನ್ಯಾಣ, ತೆಕ್ಕಟ್ಟೆ-ಕೊಮೆ, ಕುಂದಾಪುರ-ಕೋಡಿ, ಗುಜ್ಜಾಡಿ, ಗಂಗೊಳ್ಳಿ, ಮರವಂತೆ, ಕಿರಿಮಂಜೇಶ್ವರ, ಬೈಂದೂರು, ಶಿರೂರಿನ ಕರಾವಳಿಯ2,500ಮೀನುಗಾರರ ಮನೆಗಳಲ್ಲಿ ಸ್ತೋತ್ರ ಪಠಣ ನಡೆಸಲಾಗಿದೆ. ಸ್ತೋತ್ರ ಪಠಣ ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡ 400 ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಯಾನದಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರತಿನಿತ್ಯ ಸ್ತೋತ್ರ ಪಠಣಗೈಯುವಂತೆ ಸಾರ್ವಜನಿಕರನ್ನು ಪ್ರೇರೆಪಿಸಿದ್ದಾರೆ. 1008 ದೇವಸ್ಥಾನಗಳಲ್ಲಿ ಸಾಮೂಹಿಕ ಪಠಣ ಆಯೋಜಿಸಲಾಗಿತ್ತು. 12,000 ಮಂದಿ ಅಭಿಯಾನದ ಅವಧಿಯೊಳಗೆ 36 ಬಾರಿ ಸ್ತೋತ್ರ ಪಠಣ ಮಾಡಿರುತ್ತಾರೆ. 1 ಲಕ್ಷಕ್ಕಿಂತಲೂ ಅಧಿಕ ಮಂದಿ ಅಭಿಯಾನದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ. 2005ರ ಮೇ 01 ರಂದು ಮಲ್ಪೆಯ ವಡಬಾಂಡೇಶ್ವರ ಕಡಲ ತೀರದಲ್ಲಿ ಬೃಹತ್ ಸಾರ್ವಜನಿಕ ಸಾಮೂಹಿಕ ಸ್ತೋತ್ರ ಪಠಣ ನಡೆದು ಸರಿಸುಮಾರು 10 ಸಾವಿರ ಮಂದಿ ಪಾಲ್ಗೊಂಡು ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವುದು ಸ್ಮರಣೀಯ. 2006 ರಲ್ಲಿ ಉತ್ತರ ಕನ್ನಡ ಮತ್ತು ಗೋವಾ ರಾಜ್ಯದ ಅಭಿಯಾನದಲ್ಲಿ ಪ್ರಮುಖ ದೇವಸ್ಥಾನಗಳಲ್ಲಿ ಮತ್ತು ಪ್ರಮುಖ ಕಡಲ ತೀರಗಳಲ್ಲಿ ಸಾಮೂಹಿಕ ಪಠಣ ನಡೆಸಲಾಗಿದ್ದು ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಏನೂ ಖರ್ಚಿಲ್ಲದೇ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪ ನಿವಾರಣೆಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಬಹಳ ಪರಿಣಾಮಕಾರಿ. ಆದುದರಿಂದ ಅಲ್ಲಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ, ಸತ್ಸಂಗಗಳನ್ನು ನಡೆಸುವಂತೆ ಸಮಿತಿಯ ನಿರ್ದೇಶಕರಾದ ಡಾ.ಎಸ್.ಎನ್. ಪಡಿಯಾರ್ ವಿನಂತಿಸಿದ್ದಾರೆ. ಮಾಹಿತಿಗಾಗಿ 9341839965 ನ್ನು ಸಂಪರ್ಕಿಸಬಹುದಾಗಿದೆ.

 

Leave a Reply

Your email address will not be published. Required fields are marked *

8 − 7 =