ಪ್ರಾಮಾಣಿಕತೆ, ಕಠಿಣ ಶ್ರಮ, ಸಾಧನೆಗೆ ರಹದಾರಿ: ಬಿ.ಸಿ.ಪಾಟೀಲ್

Call us

Call us

ಕಲರ‍್ಸ್ ಆಫ್ ದಿ ರೈನ್ ಬೋ’ ಪುಸ್ತಕ ಬಿಡುಗಡೆ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾಲ್ಯದಿಂದಲೂ ಜೀವನದಲ್ಲಿ ಪಡೆದ ನಿರಂತರ ಶ್ರಮ, ಪಡೆದ ಅನುಭವ, ಪ್ರಾಮಾಣಿಕತೆ, ವಿಶೇಷ ಸಾಧನೆ ಮಾಡಲು ಶಕ್ತಿ, ಸ್ಪೂರ್ತಿ ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿದ್ದ ಕುಟುಂಬದ ವಿದ್ಯಾರ್ಥಿಗಳಲ್ಲಿ ಕೆಲವರು ಹತ್ತಾರು ಮೈಲಿ ನಡೆದು, ಊಟ, ಬಟ್ಟೆ ಪರಿವೆ ಇಲ್ಲದೇ ಕಷ್ಟಪಟ್ಟು ಶಿಕ್ಷಣ ಪಡೆದುದರಿಂದ ಅವರಲ್ಲಿ ಹಲವರು ಮಹತ್ ಸಾಧನೆ ಮಾಡಿದರು. ಕುಂದಾಪುರದ ಡಾ|ಉಮೇಶ್ ಭಟ್ ಅವರೂ ಹಳ್ಳಿ ಬೆಳಗೋಡಿನಿಂದ ಬಳ್ಳಾರಿ ಮೆಡಿಕಲ್ ಕಾಲೇಜಿಗೆ ತಲುಪಲು ಪಟ್ಟ ಶ್ರಮ, ಆನಂತರ ಪಡೆದ ಅನುಭವ, ಶಸ್ತ್ರ ಚಿಕಿತ್ಸಾ ತಜ್ಞರಾಗಿ ತೋರಿಸಿದ ಕರ್ತವ್ಯ ನಿಷ್ಠೆ ಅವರು ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಖ್ಯಾತ ಚಿತ್ರನಟ, ಮಾಜಿ ಶಾಸಕ ಬಿ,ಸಿ.ಪಾಟೀಲ್ ಹೇಳಿದರು.

Click here

Call us

Call us

ಕುಂದಾಪುರದಲ್ಲಿ ಡಾ| ಉಮೇಶ್ ಭಟ್ ಅವರ ಆಂಗ್ಲಭಾಷಾ ಕಾದಂಬರಿ ಕಲರ‍್ಸ್ ಆಫ್ ದಿ ರೈನ್ ಬೋ ಬಿಡುಗಡೆ ಮಾಡುತ್ತಾ ಹೇಳಿದರು. ಮಣಿಪಾಲ ಯುನಿವರ್ಸಿಟ ಪ್ರೆಸ್ ಹಾಗೂ ಕುಂದಪ್ರಭ ಕುಂದಾಪುರ ಆಶ್ರಯದಲ್ಲಿ ಕುಂದಾಪುರದ ಸ.ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ಯುನಿವರ್ಸಿಟಿ ಪ್ರಿಂಟರ‍್ಸ್‌ನ ಪ್ರಧಾನ ಸಂಪಾದಕಿ ಡಾ| ನೀತಾ ಇನಾಂದರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎಸ್.ಐ.ಬಿ.ಎಂ. ಮಣಿಪಾಲದ ಪ್ರಾಂಶುಪಾಲ ಬೆಳಗೋಡು ರಮೇಶ್ ಭಟ್, ಹಿರಿಯ ವೈದ್ಯ, ಕಾದಂಬರಿಗಾರ ಡಾ|ರಂಜಿತ್ ಕುಮಾರ್ ಶೆಟ್ಟಿ, ಕುಂದಾಪುರ ಐ.ಎಂ.ಎ. ಮಾಜಿ ಅಧ್ಯಕ್ಷೆ ಡಾ|ಭವಾನಿರಾವ್ ಭಾಗವಹಿಸಿದ್ದರು.

ಸಮಾರಂಭದ ಉದ್ಘಾಟನೆ ನಡೆಸಿ ಅಧ್ಯಕ್ಷತೆ ವಹಿಸಿದ್ದ ಡಾ|ನೀತಾ ಇನಾಂದರ್ ಮಾತನಾಡಿ “ಮಣಿಪಾಲ ಯುನಿವರ್ಸಿಟಿ ಪ್ರೆಸ್ ಈ ತನಕ ಹಲವು ವಿಷಯಗಳ ಉಪಯುಕ್ತ ಪುಸ್ತಕ ಪ್ರಕಟಿಸಿದ್ದರೂ ಕಲರ‍್ಸ್ ಆಫ್ ದಿ ರೈನ್ ಬೋ ಅಂತಹ ಪುಸ್ತಕ ಪ್ರಥಮವಾಗಿ ಪ್ರಕಟಿಸುತ್ತಿದೆ. ಇದರಲ್ಲಿ ಲೇಖಕ ಡಾ|ಉಮೆಶ್ ಭಟ್ ಅವರ ವೈಯಕ್ತಿಕ ಅನುಭವಗಳು ಮಾತ್ರ ಪ್ರಕಟವಾಗಿಲ್ಲ, ಅದರೊಂದಿಗೆ ಹತ್ತಾರು ಮಂದಿಯ ವಿಚಾರಗಳಿವೆ. ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶದಿಂದಲೂ ಈ ಕೃತಿ ಉತ್ತಮವಾಗಿದ್ದು, ಅಪರೂಪದ್ದಾಗಿದೆ. ದೇಶ ವಿದೇಶಗಳಲ್ಲಿ ಈ ಪುಸ್ತಕ ಬೆಳಕಿಗೆ ಬರಲಿದೆ ಎಂದರು.

ಬೆಳಗೋಡು ರಮೇಶ ಭಟ್ ಮಾತನಾಡಿ “ವೈದ್ಯರ ಅನುಭವ ಕಥನದ ಕೆಲವು ಉಪಯುಕ್ತ ಪುಸ್ತಕಗಳು ಲಭ್ಯವಿದೆ ಯಾದರೂ ಡಾ| ಉಮೇಶ್ ಭಟ್ ಬರೆದ ಕೃತಿ ಸುಲಭವಾಗಿ ಓದಿಕೊಂಡು ಹೋಗಬಲ್ಲ, ಹಲವು ವಿಚಾರಗಳನ್ನೊಳ ಗೊಂಡ ವಿಶೇಷ ಕೃತಿಯಾಗಿದೆ. ಸಮಾಜ ಇದನ್ನು ಸ್ವೀಕರಿಸಿ, ಉಪಯೋಗಿಸಿಕೊಳ್ಳ ಬೇಕು’ ಎಂದರು.

ಡಾ.ರಂಜಿತ್ ಕುಮಾರ್ ಶೆಟ್ಟಿ ಹಾಗೂ ಡಾ.ಭವಾನಿ ರಾವ್ ಶುಭಹಾರೈಸಿ ಡಾ.ಉಮೇಶ ಭಟ್ಟರ ಪ್ರತಿಭೆ , ಸೇವಾಗುಣ ಕರ್ತವ್ಯ ಪ್ರಜ್ಞೆ , ಮಾನವೀಯತೆ ಬಗ್ಗೆ ತಿಳಿಸಿ ಕಲರ‍್ಸ್ ಆಫ್ ದಿ ರೈನ್ ಬೋ ಎಲ್ಲರೂ ಕೊಂಡು ಓದಲೇ ಬೇಕಾದ ಸಂಗ್ರಾಹ ಯೋಗ್ಯವಾದ ಪುಸ್ತಕ ಎಂದರು.

ಲೇಖಕ ಡಾ|ಉಮೇಶ್ ಭಟ್ ಕೃತಿ ರಚನೆಯ ಹಿನ್ನೆಲೆ ವಿವರಿಸಿ ಬದುಕಿನ ಹಲವು ಮಜಲುಗಳ ಪರಿಚಯ ಒದಗಿಸಿದರು. ಈ ಕಾದಂಬರಿ ಧಾರವಾಹಿ ಯಾಗಿ ಪ್ರಕಟಿಸಿದ ಡಾ|ಭಾಸ್ಕರ ಆಚಾರ್ಯ -ಡಾ| ಸಬಿತಾ ಆಚಾರ್ಯ ಅವರ ಎನ್.ಆರ್.ಎಂ.ಎಚ್. ಪ್ರಕಾಶನ ಹಾಗೂ ಈ ಕೃತಿಯನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಣಿಪಾಲ ಯುನಿವರ್ಸಿಟಿ ಪ್ರೆಸ್‌ನ ಡಾ|ನೀತಾ ಇನಾಂದರ್ ಹಾಗೂ ಸಂಸ್ಥೆಗೆ ಆಭಾರ ವ್ಯಕ್ತಪಡಿಸಿದರು.

ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಸೋನ್ಸ್, ರಾಜೀವ್ ನಾಯ್ಕ್, ಎ.ಎ.ಕೊಡ್ಗಿ ಅನುರಾದ ಭಟ್, ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ಕಲಾವಿದ ಕೇಶವ ಸಸಿಹಿತ್ಲು ಅವರನ್ನು ಗೌರವಿಸ ಲಾಯಿತು. ಚಿತ್ರನಟ ಬಿ.ಸಿ.ಪಾಟೀಲರನ್ನು ಡಾ|ಉಮೇಶ್ ಭಟ್ ಸನ್ಮಾನಿಸಿ ಗೌರವಿಸಿದರು. ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.

 

Leave a Reply

Your email address will not be published. Required fields are marked *

13 − 11 =