ಪ್ರಾಮಾಣಿಕತೆ, ಸಾತ್ವಿಕತೆ, ವೃತ್ತಿಗೌರರವೇ ನಿಜವಾದ ಧರ್ಮ: ವೀರೇಶಾನಂದ ಸ್ವಾಮಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವ್ಯಕ್ತಿಯೋರ್ವ ಪ್ರಾಮಾಣಿಕತೆ, ನಿಸ್ವಾರ್ಥಪರತೆ, ಸಾತ್ವಿಕತೆ, ವೃತ್ತಿಗೌರವವನ್ನು ಹೊಂದಿರುವುದೇ ನಿಜವಾದ ಧರ್ಮ. ಜಪ-ತಪ, ಹೋಮ ಹವನ, ಪೂಜೆ ಪುನಸ್ಕಾರಗಳು ಧಾರ್ಮಿಕ ಆಚರಣೆಗಳಷ್ಟೇ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಮಠದ ವೀರೇಶಾನಂದ ಸ್ವಾಮಿ ಹೇಳಿದರು.

Call us

Call us

Click Here

Visit Now

ಆಳ್ವಾಸ್ ನುಡಿಸಿರಿಯಲ್ಲಿ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಧರ್ಮದ ಕುರಿತು ಮಾತನಾಡಿದರು. ಸ್ವಾಮೀಜಿಗಳು, ಸಂನ್ಯಾಸಿಗಳು ಮಾತ್ರವೇ ಧರ್ಮವನ್ನು ಆಚರಿಸಬೇಕೆಂಬ ತಪ್ಪು ಕಲ್ಪನೆಯಿದೆ. ಆದರೆ ಧರ್ಮದ ಆಚರಣೆ ಕೇವಲ ಸಂನ್ಯಾಸಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಮನುಷ್ಯನೂ ತನ್ನ ನಿಜವಾದ ಧರ್ಮವನ್ನು ಆಚರಿಸುವಂತಾಬೇಕು. ಧರ್ಮವೆಂಬುದು ಶೂರರಿಗೇ ಹೊರತು ಹೇಡಿಗಳಿಗಲ್ಲ ಎಂದರು.

Click here

Click Here

Call us

Call us

ಯಾವ ಸಮಾಜದಲ್ಲಿ ಶ್ರೇಷ್ಠ ತತ್ವಗಳು ಅನುಷ್ಠಾನಗೊಳ್ಳುತ್ತವೆಯೋ ಅದು ಅತ್ಯಂತ ಶ್ರೇಷ್ಠತಮ ಸಮಾಜವಾಗುತ್ತದೆ. ಒಬ್ಬ ಅತ್ಯುತ್ತಮ ವ್ಯಕ್ತಿಯ ಅಂತರಂಗದ ಸಾಮರ್ಥ್ಯ, ಪರಿಪೂರ್ಣತೆಯಿಂದ ಸಮಾಜಕ್ಕೆ ಉತ್ತಮ ಸಂಸ್ಕೃತಿ ದೊರೆಯಬಲ್ಲದು. ಉನ್ನತ ಸಂಸ್ಕಾರಗಳು ಸಮಾಜಕ್ಕೆ ದೊರೆಯದೇ ಹೋದರೆ ಒಬ್ಬ ವ್ಯಕ್ತಿಯ ಜೊತೆಗೆ ಅವನ ಭವಿಷ್ಯದ ಪೀಳಿಗೆಯೂ ಅದಕ್ಕೆ ಬಲಿಯಾಗುತ್ತದೆ. ಆದ್ದರಿಂದ ಸನಾತನ ಧರ್ಮದ ಆಚರಣೆ ತುಂಬಾ ಮುಖ್ಯವಾಗುತ್ತದೆ. ಧರ್ಮದ ನಿಜವಾದ ಧ್ಯೇಯ ಆಧ್ಯಾತ್ಮಿಕ ವಿಕಾಸವೇ ಆಗಿರುವುದರಿಂದ ಅದು ಸತ್ವಯುತವಾದ ಸಮಾಜವನ್ನು ಕಟ್ಟಬಲ್ಲದು. ಇಂತಹ ಆಧ್ಯಾತ್ಮಿಕ ವಿಕಾಸಗಳು ಯಾವಾಗಲೂ ಶಾಶ್ವತ ಜ್ಞಾನವನ್ನು ಮನುಷ್ಯನಿಗೆ ನೀಡುತ್ತವೆ. ಸದಾಚಾರ ಸಂಪನ್ನತೆಯನ್ನು ನೀಡುತ್ತವೆ ಎಂದರು.

ಭಾರತದ ಶ್ರೇಷ್ಠವಾದ ಸನಾತನ ಧರ್ಮ ಯಾವುದೋ ವ್ಯಕ್ತಿಗಳಿಂದ ರೂಪಿತವಾದದ್ದಲ್ಲ. ಅದು ನಿತ್ಯ ನೂತನವಾದದ್ದು. ಧರ್ಮದ ಆಳದ ಬಗ್ಗೆ ತಿಳಿದವರು ಕಡಿಮೆ; ಆಸಕ್ತಿಯುಳ್ಳವರು ಇನ್ನೂ ಕಡಿಮೆ. ಧರ್ಮವನ್ನು ಅವಲಂಬಿಸಿ ಆಚರಿಸುವುದನ್ನು ತಿಳಿಯದವರು ಧರ್ಮದ ಬಗ್ಗೆ ಮಾತಾಡಿದರೂ ಮಾತನಾಡದಿದ್ದರೂ ಏನು ವ್ಯತ್ಯಾಸ ಕಂಡುಬರುವುದಿಲ್ಲ. ನಮ್ಮ ನಿಜ ಜೀವನದಲ್ಲಿ ಧರ್ಮ ಸರಿಯಾಗಿ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಧರ್ಮದ ನಾಳೆಗಳಿಗೆ ಭದ್ರ ಬುನಾದಿ ಹಾಕಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

Leave a Reply

Your email address will not be published. Required fields are marked *

fourteen − 5 =