ಪ್ರೇರಣಾ ಯುವ ವೇದಿಕೆಯಿಂದ ಮಾಹಿತಿ ಶಿಬಿರ

Click Here

Call us

Call us

ಚಿತ್ತೂರು: ಸಮಾಜದ ಅಗತ್ಯಕ್ಕೆ ತಕ್ಕಂತೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಗುತ್ತಿರುವ ಯಶಸ್ವಿ ಸಂಘಟನೆಯಾದ ಪ್ರೇರಣಾ ಯುವ ವೇದಿಕೆ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಆಳ್ವಾಸ್ ಕಾಲೇಜು ಉಪನ್ಯಾಸಕ ದಿವ್ಯಾಧರ ಶೆಟ್ಟಿ ಕೆರಾಡಿ ಹೇಳಿದರು.

Click Here

Call us

Call us

Visit Now

ಅವರು ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರಿನ ಸಮುದಾಯ ಭವನದಲ್ಲಿ ಆಯೋಜಿಸಿದ ಆಧಾರ್ ಕಾರ್ಡ್ ಅಭಿಯಾನ ಮತ್ತು ಪಂಚಾಯತ್ ಸೌಲಭ್ಯಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು ಪ್ರೇರಣಾ ಯುವ ವೇದಿಕೆಯ ಮಹತ್ವಾಕಾಂಕ್ಷೆಯ ಪ್ರೇರಣಾ ಇಂಗ್ಲಿಷ್ ಕಲಿಕಾ ಅಭಿಯಾನ ಕಾರ್ಯಕ್ರಮಕ್ಕೆ ಮೂರು ತಿಂಗಳ ವೇತನ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ಧನ್ ಪಂಚಾಯತಿನ ಸಂಪೂರ್ಣ ಸೌಲಭ್ಯಗಳನ್ನು ವಿವರಿಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾರಣಕಟ್ಟೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಚಿತ್ತೂರು ಮತ್ತು ವೇದಿಕೆಯ ಕಾನೂನು ಸಲಹೆಗಾರರಾದ ಕೆ.ಕುಸುಮಾಕರ ಶೆಟ್ಟಿ ವಕೀಲರು ಮಾತನಾಡಿ ವೇದಿಕೆಯ ಜನಪರ ಕಾರ್ಯ ಶ್ಲಾಘಿಸಿ, ಪ್ರೋತ್ಸಾಹಿಸಿದರು. ಒಟ್ಟು 415ಜನರಿಗೆ ಆಧಾರ್ ಕಾರ್ಡ್ ಮಾಡಿಸಲಾಯಿತು.

Click here

Click Here

Call us

Call us

ಪ್ರೇರಣಾ ಯುವವೇದಿಕೆಯ ಗೌರವ ಅಧ್ಯಕ್ಷರಾದ ರಾಮಚಂದ್ರ ಮಂಜರು ಮಾರಣಕಟ್ಟೆ, ಅಧ್ಯಕ್ಷರಾದ ಚಂದ್ರ ಶೆಟ್ಟಿ ನೈಕಂಬ್ಳಿ, ಚಿತ್ತೂರು ಗ್ರಾಮ ಪಂಚಾಯತ್ ಲೆಕ್ಕ ಪರಿಶೋಧಕರಾದ ಮಹಾಬಲೇಶ್ವರ ಗೌಡ, ಶ್ರೀ ಕಾಳಿಕಾಂಬಾ ವಿ.ಎಸ್. ಎಸ್ ತಲ್ಲೂರಿನ ಶಾಖಾ ವ್ಯವಸ್ಥಾಪಕರಾದ ಯಶೋಧರ ಆಚಾರ್ಯ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಜಾಂಚಿ ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ದಿನೇಶ್ ವಂದಿಸಿದರು.

Leave a Reply

Your email address will not be published. Required fields are marked *

1 + eight =