ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ

Call us

ಕೋಟ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಮೇಘಾ ಶೆಟ್ಟಿ (17)  ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಶರಣಾದ ಘಟನೆ ಕೋಟ ಸಮೀಪದ ವಡ್ಡರ್ಸೆ ಯಾಳಕ್ಲುವಿನಲ್ಲಿ ನಡೆದಿದೆ.

Call us

ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಈಕೆ ಸೋಮವಾರ ಪ್ರಕಟವಾಗುವ ಫಲಿತಾಂಶದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಳ್ಳುವ ಭಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಫೇಲ್‌ ಆಗುತ್ತೇನೆ ಎಂದುಕೊಂಡಿದ್ದ ಈಕೆ 358 ಅಂಕ ಪಡೆದು ಪ್ರಥಮ ದರ್ಜೆಯ ಅಂಚಿನಲ್ಲಿ ಉತ್ತೀರ್ಣಳಾಗಿದ್ದಾಳೆ. ಆದರೆ ಪರೀಕ್ಷೆಯಲ್ಲಿ ಪಾಸಾದರೂ ಅವಸರಗೊಂಡು ಜೀವವನ್ನೇ ಕಳೆದುಕೊಂಡಿದ್ದಾಳೆ.

ಮೇಘಾಳ ತಂದೆ ತಾಯಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ಈಕೆ ತನ್ನ ಅಜ್ಜ, ಅಜ್ಜಿ, ಅಕ್ಕನೊಂದಿಗೆ ವಡ್ಡರ್ಸೆಯಲ್ಲಿ ನೆಲೆಸಿದ್ದಳು. ಹಾಸ್ಟೇಲ್‌ನಲ್ಲಿದ್ದು ಪಿಯುಸಿ ವ್ಯಾಸಂಗ ಮಾಡಿದ್ದಳು. ಕಷ್ಟದಲ್ಲಿಯೇ ಜೀವನ ನಡೆಸಿದ್ದಳು. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

nine − 9 =