ಫೆ.21: ಕುಂದಾಪುರಕ್ಕೆ ಖ್ಯಾತ ಗಾಯಕಿ ವಾಣಿ ಜಯರಾಂ

Call us

ಬೆಸುಗೆ.. ಬೆಸುಗೆ.. ಜೀವನವೆಲ್ಲ ಸುಂದರ.. ಬೆಸುಗೆ.., ನಾ ನಿನ್ನ ಮರೆಯಲಾರೆ, ಪ್ರಿಯತಮಾ ಕರುಣೆಯ ತೋರೆಯ.., ತೆರೆದಿದೆ ಮನೆ ಓ ಬಾ ಅತಿಥಿ.. ಎನೇನೋ ಆಸೆ ನೀ ತಂದ ಭಾಷೆ.. ಮೊದಲಾದ ಚಲನಚಿತ್ರ ಗೀತೆಗಳನ್ನು ಹಾಡಿ ಕನ್ನಡ ಪ್ರೇಕ್ಷಕರ ಮನದಲ್ಲಿ ಪಡಿಯಚ್ಚು ಮೂಡಿಸಿ ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಫೆ. ೨೧ರಂದು ಕುಂದಾಪುರಕ್ಕೆ ಆಗಮಿಸಲಿದ್ದಾರೆ.

Call us

ಕೋಟದ ಮನಸ್ಮಿತ ಫೌಂಡೇಶನ್‌ನ ಆಶ್ರಯದಲ್ಲಿ ಸಹನಾ ಗ್ರೂಫ್ ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸಮೀಪದ ಕೋಟೇಶ್ವರದ ಸಹನಾ ಎಸ್ಟೇಟ್‌ನಲ್ಲಿ ಗಾಯಕ ಡಾ. ಸತೀಶ ಪೂಜಾರಿಯವರ ಪರಿಕಲ್ಪನೆ ಹಾಗೂ ನೇತೃತ್ವದಲ್ಲಿ ಕರ್ನಾಟಕದ ಹೆಸರಾಂತ ಗಾಯಕರ ಸಮ್ಮಿಲನದಲ್ಲಿ ಸಂಗೀತ ರಸಸಂಜೆ ’ವಾಣಿಯ ಸ್ವರ ಝೇಂಕಾರ’ ಕಾರ್ಯಕ್ರಮವು ಮಾನಸಿಕ ಅಸ್ವಸ್ಥರ ಸಹಾಯಾರ್ಥವಾಗಿ ಫೆ. 21ರಂದು ಸಂಜೆ 6:30ರಿಂದ ಜರುಗಲಿದೆ. ಈ ರಸಸಂಜೆಯ ’ವಾಣಿಯ ಸ್ವರ ಝೇಂಕಾರ’ದಲ್ಲಿ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಅವರು ಭಾಗವಹಿಸಿ ತಮ್ಮ ಗಾನ ಮಾಧುರ್ಯದಿಂದ ಸಾವಿರಾರು ಪ್ರೇಕ್ಷಕರ ಮನರಂಜಿಸಲಿದ್ದಾರೆ. ಕಾರ್ಯಕ್ರಮದ ಟಿಕೆಟ್‌ಗಳು ಶ್ರೀಮಾತಾ ಆಸ್ಪತ್ರೆ ಕುಂದಾಪುರ, ವೈಓ ಗ್ಯಾಲರಿ ಕುಂದಾಪುರ, ಸಾಧನಾ ಕಲಾಕೇಂದ್ರ ಕುಂದಾಪುರ, ಸಹನಾ ಎಸ್ಟೇಟ್ ಕೋಟೇಶ್ವರ, ಹೋಟೆಲ್ ಇಂದ್ರಪ್ರಸ್ಥ ತೆಕ್ಕಟ್ಟೆ, ಪರಿವರ್ತನ ರಿಹ್ಯಾಬಿಲಿಟೇಷನ್ ಸೆಂಟರ್ ಕೋಟ, ಮದರ್ ಪ್ಯಾಲೇಸ್ ಬ್ರಹ್ಮಾವರ, ಹಾರ್ಡ್‌ವೇರ್ ಬಜಾರ್ ಕರಾವಳಿ ಬೈಪಾಸ್ ಉಡುಪಿಯಲ್ಲಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 760756822, 9448311909, 08254-234856ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಡಾ. ಪ್ರಕಾಶ್ ತೋಳಾರ್, ಡಾ. ಸತೀಶ್ ಪೂಜಾರಿ, ಸುರೇಂದ್ರ ಶೆಟ್ಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

five × one =