ಬಗ್ವಾಡಿ: ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರಕೃತಿಯ ಋಣವನ್ನು ತಿರಿಸಲು ಯಾರಿಗೂ ಸಾಧ್ಯವಿಲ್ಲ. ಮಳೆ ಕಡಿಮೆ ಆದರೆ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತದೆ. ನಾವು ಯಾವುದೇ ವಸ್ತುವನ್ನು ಪ್ರೀತಿಸಿದರೆ ಮಾತ್ರ ಅದರ ಮೇಲೆ ನಮಗೆ ಪ್ರೀತಿ . ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪರಿಸರದ ಗಿಡ ಮರಗಳನ್ನು ಪ್ರೀತಿಸಬೇಕು ಎಂದು ಕುಂದಾಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿ ತುಳಸಿ ಹೇಳಿದರು.

Call us

Call us

Click Here

Visit Now

ಅವರು ಬಗ್ವಾಡಿಯಲ್ಲಿ ಅರಣ್ಯ ಇಲಾಖೆ, ಶ್ರೀ ಮಹಿಷಮರ್ದಿನಿ ಯುವಕ ಮಂಡಲ ಹಾಗೂ ಹರೆಗೋಡು ಮಹಾವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು.

Click here

Click Here

Call us

Call us

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಚ್ಚು ನಾಯ್ಕ್ ಹಾಗೂ ಕೃಷಿಕ ನಾಗಪ್ಪಯ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರಸಿಂಹ ಗಾಣಿಗ ಹರೆಗೋಡು, ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಹರೆಗೋಡು, ಮಾಹವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ ಡಿ.ಎಚ್., ಕೃಷಿಕ ಶಂಕರನಾರಾಯಣ ಭಟ್, ಯುವಕ ಮಂಡಲದ ಅಧ್ಯಕ್ಷ ಪ್ರಕಾಶ ಆಚಾರ್ಯ ಬಗ್ವಾಡಿ, ಕೊರುಗು ನಾಯ್ಕ್, ದೇವದಾಸ ಭಟ್, ಭಾಸ್ಕರ ಆತ್ರಾಡಿ ವಂಡ್ಸೆ ಹಾಗೂ ರಘುರಾಮ ಗಾಣಿಗ ಮಲ್ಯಾರಿ ಉಪಸ್ಥಿತರಿದ್ದರು.

ಮಹಾವಿಷ್ಣು ಯುವಕ ಮಂಡಲದ ಶ್ರೀಕಾಂತ ಆಚಾರ್ಯ ಸ್ವಾಗತಿಸಿದರು. ನರಸಿಂಹ ಗಾಣಿಗ ಹರೆಗೋಡು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ವಂದಿಸಿದರು.

Leave a Reply

Your email address will not be published. Required fields are marked *

five × 2 =