ಬೀಜಾಡಿ ಮಿತ್ರ ಸಂಗಮ ರಜತಮಹೋತ್ಸವ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ನಂತೆ ಮಿತ್ರ ಸಂಗಮ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಸಮಾಜದಲ್ಲಿ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಮನುಷ್ಯನ ಹುಟ್ಟು ಸಾವುಗಳ ನಡುವೆ ಕೇವಲವಾಗಿ ಬದುಕುವುದಕ್ಕಿಂತ ಸಮಾಜದಲ್ಲಿ ಬಡವರ ಕಣ್ಣೀರು ಒರೆಸುವ ಕೆಲಸಗಳನ್ನು ಮಾಡಬೇಕು. ಜನರ ಸೇವೆಯೇ ದೊಡ್ಡ ದೇವರ ಸೇವೆ. ನಾವು ಗಳಿಸಿದ ಸಂಪತ್ತಿನಲ್ಲಿ ಕೆಲವೊಂದು ಭಾಗವನ್ನು ಸಮಾಜಕ್ಕೆ ನೀಡಿದಾಗ ದೊಡ್ಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು.

Click Here

Call us

Call us

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ಸಮಾರಂಭದ ರಜತಪಥ ನೆರಳು ಬೆಳಿಕಿನ ಸಹಯಾನ 3 ದಿನಗಳ ಕಾರ್ಯಕ್ರಮವನ್ನು ಶುಕ್ರವಾರ ಬೀಜಾಡಿಯ ಮಿತ್ರಸೌಧದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

Click here

Click Here

Call us

Visit Now

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಸಂಸ್ಥೆಯ ವೆಬ್ಸೈಟ್ ನ್ನು ಬಿಡುಗಡೆಗೊಳಿಸಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಪ್ರೇಮಿ ಬಿ.ಶೇಷಗಿರಿ ಗೋಟ, ಕೋಟಿಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಬೆಟ್ಟಿನ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕಾರ್ಕಡ ರಾಜು ಪೂಜಾರಿ, ಉದ್ಯಮಿ ಕೆ.ಆರ್.ನಾಯ್ಕ್, ಬೀಜಾಡಿ ಮಠದಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಬಿ.ಜಿ.ನಾಗರಾಜ್, ಮಿತ್ರಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್, ಕಾರ್ಯದಶಿ೯ ರಾಜೇಶ್ ಆಚಾರ್, ರಜತಮಹೋತ್ಸವ ಸಮಿತಿಯ ಅಧ್ಯಕ್ಷ ದೀಪಾನಂದ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೀಜಾಡಿಯ ಮೂಡುಶಾಲಾ ನಿವೃತ್ತ ಶಿಕ್ಷಕ ಕರುಣಾಕರ್ ಶೆಟ್ಟಿ ವಕ್ವಾಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವಾವಲಂಬನೆ ಬದುಕಿಗಾಗಿ ಮಹಿಳೆಯರಿಗೆ ಗೋವುಗಳನ್ನು ವಿತರಿಸಲಾಯಿತು.

ಸುಷ್ಮಾ ಆಚಾರ್ಯ ಪ್ರಾಥಿ೯ಸಿದರು. ರಜತ ಮಹೋತ್ಸವ ಕಾರ್ಯದಶಿ೯ ಚಂದ್ರ ಬಿ.ಎನ್ ಸ್ವಾಗತಿಸಿದರು. ಮಿತ್ರಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ಥಾಪಕ ಕಾರ್ಯದಶಿ೯ ಮಂಜುನಾಥ್ ಬೀಜಾಡಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಷ್ಮಾ ಆಚಾರ್ಯ ಬೀಜಾಡಿ ಮತ್ತು ಮಾಧವ ಬೀಜಾಡಿ ಇವರಿಂದ ಸುಗುಮ ಸಂಗೀತ ನಡೆಯಿತು.

Call us

Leave a Reply

Your email address will not be published. Required fields are marked *

one × five =