ಬಡಾಕೆರೆ ನಾಗರಿಕರನ್ನು ಆತಂಕ್ಕೀಡು ಮಾಡಿದ ನಕಲಿ ಬಾಂಬ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಬಳಿ ಸೋಮವಾರ ಸಂಭವಿಸಿದ ಸ್ಪೋಟ, ನಾಗರಿಕರನ್ನು ಕೆಲಕಾಲ ಆಂತಕಕ್ಕೀಡುಮಾಡಿತು.

Call us

Call us

Call us

ಸ್ಪೋಟದ ಶಬ್ದ ಕೇಳಿ ಬಾಂಬ್ ಸ್ಪೋಟ ಸಂಭವಿಸಿರಬಹುದು, ಬಡಾಕೆರೆಯ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಬಳಿ ಬಾಂಬ್ ಇಡಲಾಗಿದೆ ಎಂಬ ಮಾತುಗಳು ಕೇಳಿಬಂದವು. ಪೊಲೀಸರಿಗೂ ಮಾಹಿತಿ ತಲುಪಿ ಸ್ಥಳಕ್ಕೆ ಬಂದು ಪರಿಶೀಲಿಸಿದ ಬಳಿಕ ನಿಜಾಂಶ ಅರಿವಿಗೆ ಬಂದಿದೆ. ಕಿಡಿಗೇಡಿಗಳು ಐಸ್‌ಕ್ರೀಮ್ ಬಾಲ್‌ನಲ್ಲಿ ಪಟಾಕಿಯ ಮದ್ದುತುಂಬಿಸಿ ಬಟ್ಟೆ ಸುತ್ತಿ ಕಸದ ರಾಶಿ ಬಳಿ ಇಟ್ಟಿದ್ದರು. ಬೆಳಿಗ್ಗೆ ಮಹಿಳೆಯೋರ್ವರು ಕಸದ ರಾಶಿಯನ್ನು ಒಟ್ಟುಮಾಡಿ ಬೆಂಕಿ ಹಚ್ಚಿದಾಗ ಅದರ ಮಧ್ಯೆ ಇದ್ದ ಸಿಡಿಮದ್ದು ತುಂಬಿದ ಬಾಲ್‌ಗೆ ಬೆಂಕಿ ತಗುಲು ಸ್ಪೋಟಗೊಂಡು ದೊಡ್ಡ ಸದ್ದು ಮಾಡಿತ್ತು. ಇದು ಬಾಂಬ್ ಇರಬಹುದು ಎಂಬ ಗಾಳಿಸುದ್ದಿ ಹರಡಿ ಪರಿಸರದ ಜನರನ್ನು ಆತಂಕಕ್ಕೀಡು ಮಾಡಿತ್ತು. ಪೊಲೀಸರು ಬಂದು ಪರಿಶೀಲಿಸಿ ನಿಜಾಂಶ ಬಯಲಿಗೆಳೆದಿದ್ದಾರೆ.

Leave a Reply

Your email address will not be published. Required fields are marked *

two + 3 =