ಬಡ ಜನರಿಗೆ ದೊರಕುವಂತಾಗಲಿ ಕಡಿಮೆ ವೆಚ್ಚದ ಲ್ಯಾಬ್ ಟೆಸ್ಟಿಂಗ್

Call us

Call us

ಕೋರೊನಾ ಒಂದನೆ ಎರಡನೇ ಅಲೆ ಎಲ್ಲ ಜನ ಸಾಮಾನ್ಯರ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ನಿತ್ಯ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿರುವುದರಲ್ಲಿ ಸಂಶಯವಿಲ್ಲ. ಬಡ ಜನರು ಅನಾರೋಗ್ಯಕ್ಕೆ ತುತ್ತಾದಾಗ ದುಬಾರಿ ಬೆಲೆಯ ಔಷಧಿ, ಲ್ಯಾಬ್ ಟೆಸ್ಟಿಂಗ್ ನಂತಹ ವ್ಯವಸ್ಥೆಗಳು ಬಡವರಿಗೆ ಕಬ್ಬಿಣ ಕಡಲೆಯಾಗಿ ಪರಿಣಮಿಸುತ್ತದೆ. ಖಾಸಗಿ ಲಾಬ್ ಟೆಸ್ಟಿಂಗ್ ದೊಡ್ಡ ಹೊರೆಯೂ ಆಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಕೋಟದ ಆಶ್ರಿತ್ ನರ್ಸಿಂಗ್ ಕಾಲೇಜಿನ ಅರೆ ವೈದ್ಯಕೀಯ ವಿದ್ಯಾರ್ಥಿನಿ ಕುಮಾರಿ ಶ್ವೇತಾ ಕುಂದರ್ ಸೂಚಿಸಿರುವ ಯೋಜನೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

Call us

Call us

Call us

ಜನೌಷಧ ಕೇಂದ್ರ ಕೇಂದ್ರ ಸರಕಾರದ ಜನಪರ ಯೋಜನೆಗಲ್ಲಿ ಒಂದು ಇದು ದೇಶದ ಬಹುತೇಕ ಬಡವರ್ಗದ ಜನರ ಪಾಲಿನ ಸಂಜೀವಿನಿಯಾಗಿದೆ. ದಿನದ/ವಾರದ/ತಿಂಗಳ ದುಡಿಮೆಯ ಹಣದ ಬಹುಪಾಲನ್ನು ಔಷಧಿಗಾಗಿ ಮೀಸಲಿಡುತ್ತಿದ್ದ ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧಗಳು ದೊರಕುವಂತಾಗಿದೆ. ಹಾಗೆಯೇ ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರು ಬರೆದುಕೊಡುವ ಲ್ಯಾಬ್ ಟೆಸ್ಟ್, ಎಕ್ಸರೇ, ಸ್ಕ್ಯಾನಿಂಗ್ ಪರೀಕ್ಷೆಗಳು ದುಬಾರಿಯಾಗಿ ಹಲವು ಬಾರಿ ಬಡ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಣದ ಸಮಸ್ಯೆಯಿಂದ ಜೀವಕ್ಕೆ ಆಪತ್ತು ಮಾಡಿಕೊಂಡ ಉದಾಹರಣೆ ನಮ್ಮ ಮುಂದಿದೆ. ಕೇಂದ್ರ ರಾಜ್ಯ ಸರಕಾರವು ಜನೌಷಧಿಯಂತೆಯೇ ಲ್ಯಾಬ್ ಟೆಸ್ಟ್, ಎಕ್ಸರೇ, ಸ್ಕಾನಿಂಗ್‌ಗಳಂತಹ ಪೂರ್ಣ ಪ್ರಮಾಣದ ಪರೀಕ್ಷಗಳು ಕಡಿಮೆ ಬೆಲೆಗೆ ದೊರಕುವಂತೆ ಜನೌಷಧ ಹಾಗೆ ಅಂಗಡಿಗಳನ್ನು ತೆರೆದು ಕಡಿಮೆ ದರದಲ್ಲಿ ಬಡವರೂ ಕೂಡ ಇದರ ಪ್ರಯೋಜನೆ ಪಡೆದುಕೊಳ್ಳಬಹುದು. ಕೇಂದ್ರ ಸರಕಾರ-ರಾಜ್ಯ ಸರಕಾರ ಹಲವು ಯೋಜನೆಗಳು ಜಾರಿಗೆ ತರುತ್ತಿದೆ. ಅದರಂತೆ ಜನೌಷಧ ಮಳಿಗೆ ಹಾಗೆಯೇ ಇಂತಹ ವೈದ್ಯಕೀಯ ಯೋಜನೆಗಳು ಜಾರಿಗೆ ತಂದರೆ ಬಡ ಜನರಿಗೆ ಅನುಕೂಲವಾಗುವುದರಲ್ಲಿ ಮಾತಿಲ್ಲ. ಜನಪ್ರತಿನಿಧಿಗಳು ಆಸಕ್ತಿ ವಹಿಸಿದರೆ ಇದು ಸಾಧ್ಯ ಎಂಬುವುದು ವಿದ್ಯಾರ್ಥಿನಿ ಶ್ವೇತಾ ಕುಂದರ್ ಅವರ ಅಭಿಪ್ರಾಯ.

Call us

Call us

ಸಾಮಾಜಿಕ ಜಾಲತಾಣದಲ್ಲಿ ವೈರಲ್
ಶ್ವೇತಾ ಕುಂದರ್ ಅವರು ಹಾಕಿದ ಈ ಆದೋಂಲನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಆದಷ್ಟು ಬೇಗ ಈ ಯೋಜನೆ ಜಾರಿಗೆ ಬಂದು ಜನ ಸಾಮಾನ್ಯರಿಗೆ ಪ್ರಯೋಜನವಾಗಲಿ. ಸಚಿವರು, ಶಾಸಕರು ಇದರ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಬಡ ಜನರು ಕೆಲವೊಂದು ವೈದ್ಯಕೀಯ ಸೌಲಭ್ಯ ಸಿಗದೆ ಪರದಾಡುವುದನ್ನು ನೋಡಿದ್ದೇವೆ, ಜನೌಷಧಿ ಮಳಿಗೆ ಆರಂಭವಾದಗಿಂದ ಕಡಿಮೆ ಬೆಲೆಗೆ ಔಷಧ ದೊರಕಿ ಉಪಯೋಗವಾಗುತ್ತಿದೆ. ಅದರಂತೆ ಲ್ಯಾಬ್ ಟೆಸ್ಟ್, ಸ್ಕಾನಿಂಗ್, ಎಕ್ಸರೇ ಅಂತಹ ವೈದ್ಯಕೀಯ ಪರೀಕ್ಷೆಗಳು ಕಡಿಮೆ ಬೆಲೆಗೆ ದೊರಕುವಂತೆ ಆಗಬೇಕು. ಶ್ವೇತರವರ ಅನಿಸಿಕೆ ಸೂಕ್ತ

  • ಅಮೃತ್ ಪೂಜಾರಿ, ಸದಸ್ಯರು, ಯಡ್ತಾಡಿ ಗ್ರಾಮ ಪಂಚಾಯತ್

Leave a Reply

Your email address will not be published. Required fields are marked *

3 × 4 =