ಬಲೆ ಬಿಡಿಸಲು ಹೋದ ಮೀನುಗಾರ ನದಿಗೆ ಬಿದ್ದು ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಮೀನುಗಾರಿಕೆ ಮಾಡುವ ಸಮಯ ನದಿಯ ತಳದಲ್ಲಿಸಿಲುಕಿಕೊಂಡಿದ್ದ ಬಲೆಯನ್ನು ಬಿಡಿಸಲು ಹೋದ ಮಿನುಗಾರ ಆಯತಪ್ಪಿ ನದಿಗೆ ಉರುಳಿದ ದಾರುಣ ಘಟನೆ ಗಂಗೊಳ್ಳಿ ಪಂಚಗಂಗಾವಳಿಯ ತಟದಲ್ಲಿ ನಡೆದಿದೆ. ಭಟ್ಕಳ ಮೂಲದ ರಾಜೇಶ್ ಖಾರ್ವಿ ಎಂಬವರೇ ಮೃತ ಪಟ್ಟ ದುರ್ದೈವಿ ಯಾಗಿದ್ದು ಕಳೆದ ಕೆಲವು ಸಮಯದಿಂದ ಅವರು ಗಂಗೊಳ್ಳಿ ಗುಡ್ಡಿಕೇರಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಮೀನುಗಾರಿಕೆ ತೆರಳಿದ ಅವರು ಮೀನುಗಾರಿಕೆಯನ್ನು ಮುಗಿಸಿ ಹಿಂತಿರುಗುವಾಗ ನದಿಯ ಆಳದಲ್ಲಿ ಸಿಲುಕಿಕೊಂಡ ಬಲೆಯನ್ನು ಬಿಡಿಸಲುಯತ್ನಿಸಿದಾಗ ಅವಘಡವು ಸಂಭವಿಸಿತ್ತು. ತಕ್ಷಣ ಸಮೀಪದಲ್ಲಿದ್ದ ಇತರ ಮೀನುಗಾರರು ಅವರನ್ನು ರಕ್ಷಿಸಲು ಯತ್ನಿಸದ್ದರೂ ಅದು ಸಾಧ್ಯವಾಗಿರಲಿಲ್ಲಾ ಇಲ್ಲಿ ನೀರು ಅಳವಾದ ಸುಳಿಯನ್ನು ಹೊಂದಿರುವುದರಿಂದ ಅವರ ಮೃತ ದೇಹ ಕೂಡಲೇ ಪತ್ತೆಯಾಗಿರಲಿಲ್ಲ. ಹುಡುಕಾಟ ನಡಸಿದ ಬಳಿಕ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಸೇರಿದಂತೆ ಇತರರು ಭೇಟಿನೀಡಿ ಪರಿಶೀಲಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Call us

Call us

Call us

Leave a Reply

Your email address will not be published. Required fields are marked *

3 × 4 =