ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರರಿಗೆ ಸನ್ಮಾನ

Call us

ಕುಂದಾಪುರ: ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಸಮಾಜ ಸೇವಾಕೂಟ (ರಿ.) ಬೆಂಗಳೂರು ಇದರ ರಜತ ಮಹೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜ್ಯೋತಿಷಿ ಹಾಗೂ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರನ್ನು ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಗೋಪಾಲ್‌ಕೃಷ್ಣ ಕೊಂಚಾಡಿಯವರು ಸನ್ಮಾನಿಸಿ ಗೌರವಿಸಿದರು.

Call us

Call us

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶಾಲಿ ಸಮಾಜ ಸೇವಾ ಕೂಟದ ಅಧ್ಯಕ್ಷರಾದ ಮಾಧವ ಶೆಟ್ಟಿಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಸೌಧದ ಮಾಜಿ ವರದಿಗಾರ ರಘು ಶೆಟ್ಟಿಗಾರ್ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭದ ಅಧ್ಯಕ್ಷ ಪುರದಂದ ಡಿ. ಶೆಟ್ಟಿಗಾರ್, ಮುಂಬೈಯ ಪದ್ಮಶಾಲಿ ಸಂಘದ ದಯಾನಂದ ಶೆಟ್ಟಿಗಾರ್, ದುಬೈಯ ಪದ್ಮಶಾಲಿ ಸಮುದಾಯದ ರವಿ ಶೆಟ್ಟಿಗಾರ್, ಕರ್ನಾಟಕ ರಾಜ್ಯ ಪದ್ಮಶಾಲಿ ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣಮೂರ್ತಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ವೆಂಕಟೇಶ್ವರ್, ಕಲ್ಲಿಕೋಟೆ ಮಲಬಾರ್ ಕಣ್ಣಿನ ಆಸ್ಪತ್ರೆ ಸಂಶೋಧನ ಕೇಂದ್ರದ ಡಾ| ಚಂದ್ರಶೇಖರ್, ಮಣಿಪಾಲ್ ಮೆಡಿಕಲ್ ಕಾಲೇಜಿನ ಡಾ| ವಸುಧಾದೇವಿ, ಮಹಾರಾಷ್ಟ್ರದ ಹೈಸ್ಕೂಲಿನ ಪ್ರಾಚಾರ್ಯರಾದ ಶ್ರೀಮತಿ ಸರೋಜಾ ಎಸ್. ಶೆಟ್ಟಿಗಾರ್ ಉಪಸ್ಥಿತರಿದ್ದರು. ರಘು ಶೆಟ್ಟಿಗಾರ್ ಸ್ವಾಗತಿಸಿದರೆ, ಗೋಪಾಲ್‌ಕೃಷ್ಣರು ವಂದಿಸಿದರು.

Leave a Reply

Your email address will not be published. Required fields are marked *

fifteen − thirteen =