ಬಸವರಾಜ ಕಟ್ಟಿಮನಿ ಕಾದಂಬರಿಗಳ ಮರುಚಿಂತನೆ: ವಿಚಾರ ಸಂಕಿರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸವರಾಜ ಕಟ್ಟಿಮನಿಯವರು ೨೦ನೇ ಶತಮಾನದ ಪ್ರಗತಿಶೀಲ ಸಾಹಿತ್ಯಗಳ ರಚನಕಾರರಲ್ಲಿಒಬ್ಬರಾಗಿದ್ದರು. ಅವರ ಸಾಹಿತ್ಯವು ಸಮಾಜದಲ್ಲಿನ ನೈಜ ಪರಿಸ್ಥಿತಿಯನ್ನು ತಿಳಿಸುವ ಕಾದಂಬರಿಗಳಾಗಿ, ಸಮಾಜವನ್ನು ತಿಳಿಯಲು ಅವಕಾಶ ಮಾಡಿಕೊಟ್ಟವು ಎಂದು ಅಕಾಡೆಮಿ ಆಫ್ ಜನರಲ್‌ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಅವರು ಹೇಳಿದರು.

Call us

Call us

Visit Now

ಅವರು ಇಲ್ಲಿನ ಭಂಡಾರ್ಕಾರ‍್ಸ್‌ಕಾಲೇಜು ಮತ್ತುಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಸಹಯೋಗದಲ್ಲಿಬಸವರಾಜ ಕಟ್ಟೀಮನಿ ಜನ್ಮದಿನದ ಶತಮಾನೋತ್ಸವ -೨೦೧೯ರ ಪ್ರಯುಕ್ತ ನಡೆದ ಬಸವರಾಜ ಕಟ್ಟಿಮನಿ ಕಾದಂಬರಿಗಳು; ಮರುಚಿಂತನೆಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

Click here

Call us

Call us

ಕಡುಬಡತನದಅವರಜೀವನ ಸಾಗಿಸಿದ ವ್ಯಕ್ತಿಯಿಂದಅದ್ಭುತ ಕಾದಂಬರಿಗಳು ಹೊರಹೊಮ್ಮಿವೆ. ಇಂತಹಉತ್ಕೃಷ್ಟ ಸಾಹಿತ್ಯ ನೀಡಿದ ವ್ಯಕ್ತಿಯಘನತೆ ಮೆಚ್ಚುವಂತಹದ್ದು. ಅವರ ಮಾಡಿ ಮಡಿದವರುಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಮಗ್ಗುಲುಗಳನ್ನು ಹೇಳತ್ತವೆ. ಅವರಜರತಾರಿ ಜಗದ್ಗುರುಗಳು ಕಾದಂಬರಿಯ ಮೂಲಕ ಅಂದಿನ ಕಾಲದಲ್ಲಿ ಮಠಾಧಿಪತಿಗಳನ್ನು ಎದುರು ಹಾಕಿಕೊಳ್ಳುವ ಅವರಗಟ್ಟಿತನಅವರಲ್ಲಿನ ವಿಭಿನ್ನ ನೆಲೆಯನ್ನು ತಿಳಿಸುತ್ತವೆ. ಜ್ವಾಲಾಮುಖಿಕಾದಂಬರಿಯುಜನಸಾಮಾನ್ಯರ ನೋವು ನಲಿವುಗಳನ್ನು ಕಾಣಬಹುದು. ಇಂತಹ ಶ್ರೇಷ್ಠ ಕಾದಂಬರಿಕಾರನ ಕಾದಂಬರಿಗಳ ಮರುಚಿಂತನೆ ಮಾಡಿ ಕೃತಿಗಳನ್ನು ವಿಚಾರ ವಿಮರ್ಶೆ ನಡೆಸಿ ಮೆಲುಕು ಹಾಕುವಂತಹ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕಿದೆಎಂದುಅಭಿಪ್ರಾಯಪಟ್ಟರು.

ಅಂದಿನ ಕಾಲದಲ್ಲಿಓದುವ ವರ್ಗವಿತ್ತು. ಮತ್ತು ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಇಂದಿನ ವಿದ್ಯಾರ್ಥಿಗಳು ನೀಡಿದ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವುದುದ ಕಡಿಮೆಯಾಗುತ್ತಿರುವುದು ಶೋಚನೀಯ. ಇದು ವಿದ್ಯಾರ್ಥಿಯ ಬೆಳವಣಿಗೆ ದೃಷ್ಠಿಯಿಂದ ಶೋಭೆಅಲ್ಲ್. ನೀವು ಎಳೆಯರು ಎಚ್ಚೆತ್ತುಕೊಳ್ಳಬೇಕು ಎಂದು ವಿಷಾದಿಸಿದರು.

ಬಸವರಾಜಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಇದರಅಧ್ಯಕ್ಷರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬದುಕಿನಲ್ಲಿ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ ಬಸವರಾಜಕಟ್ಟಿಮನಿಅವರು ಸಮಾಜದಅಸಮತೋಲನದ ವ್ಯವಸ್ಥೆಯ ಬಗ್ಗೆ ಕಂಡುಅಸಮಧಾನ ಹೊಂದಿದ್ದರು. ಸಮಾಜದಎಲ್ಲಾ ಪಾತ್ರಗಳ ಒಳಗೆ ತಾವಾಗಿ ಅನುಭವಿಸಿಸ ಕಾದಂಬರಿಗಳನ್ನು ರಚಿಸಿದರು ಎಂದು ಹೇಳಿದರು.

ಬಸವರಾಜಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿಇದರ ಸದಸ್ಯ ಸಂಚಾಲಕರಾದ ಡಾ.ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿಈ ಸಂದರ್ಭದಲ್ಲಿಕಾಲೇಜಿನ ಪ್ರಾಮಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ,ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ರಾಮಚಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘಟಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದಡಾ.ರೇಖಾ ಬನ್ನಾಡಿ ಸ್ವಾಗತಿಸಿದರು.ಉಪನ್ಯಾಸಕ ಮಂಜುನಾಥ್‌ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕಡಾ.ಅರುಣಕುಮಾರ್‌ಎಸ್.ಆರ್ ವಂದಿಸಿದರು.

Leave a Reply

Your email address will not be published. Required fields are marked *

two × 3 =