ಬಸ್ರೂರು ಅಪ್ಪಣ್ಣ ಹೆಗ್ಡೆಯುವರ ಹುಟ್ಟುಹಬ್ಬ: ದತ್ತಿನಿಧಿ ವಿತರಣೆ, ಶಿಕ್ಷಣ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತನಿಧಿ ಪ್ರತಿಷ್ಠಾನದ ವತಿಯಿಂದ ಅಪ್ಪಣ್ಣ ಹೆಗ್ಡೆ ಅವರ 82ನೇ ಹುಟ್ಟುಹಬ್ಬದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಗರದ ವನಶ್ರೀ ವಸತಿ ವಿದ್ಯಾಲಯದ ಮೆನೇಜಿಂಗ್ ಟ್ರಸ್ಟಿ ಎಚ್ . ಪಿ. ಮಂಜಪ್ಪ ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸಿ ಪ್ರದಾನ ಮಾಡಲಾಯಿತು.

ಪೊಳಲಿಯ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪ್ರದಾನಿಸಿ ಆಶೀರ್ವಚನ ನೀಡಿ ಅಪ್ಪಣ್ಣ ಹೆಗ್ಡೆ ಅವರ ವ್ಯಕ್ತಿತ್ವ ಅಸಾಧಾರಣವಾದುದು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಮಾರ್ಗದರ್ಶಿ ನಾಯಕರಾದವರು. ಸಹಕಾರಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪ್ಪಣ್ಣ ಹೆಗ್ಡೆಯವರು ಅನುಪಮ ಸೇವೆ ಸಲ್ಲಿಸಿದವರು. ರಾಜಕೀಯದಲ್ಲೂ ಬೆಳೆದವರು. ಹೆಗ್ಡೆ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾದುದು. ಅವರು ಶತಮಾನದ ವ್ಯಕ್ತಿ ಎಂದರು.

ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಸಾಗರದ ಎಚ್ . ಟಿ. ಮಂಜಪ್ಪ ಅವರು ಮಾತನಾಡಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪಡೆಯುವುದೆ ನನಗೆ ಹೆಮ್ಮೆಯ ವಿಷಯವಾಗಿದೆ. ಅಪ್ಪಣ್ಣ ಹೆಗ್ಡೆ ಅವರದ್ದು ಮಾರ್ಗದರ್ಶಿ ವ್ಯಕ್ತಿತ್ವ ಎಂದರು.

ಹುಟ್ಟುಹಬ್ಬ ಆಚರಿಸಿಕೊಂಡ ಬಿ.ಅಪ್ಪಣ್ಣ ಹೆಗ್ಡೆ ಅವರು ಮಾತನಾಡಿ ಜನರ ಆಶೀರ್ವಾದದಿಂದ ಉನ್ನತಿ ಸಾಧಿಸುವಂತಾಗಿದೆ. ಮುಂದೆಯೂ ಜನರ ಸೇವೆ ಮಾಡುವ ಇಚ್ಛೆಯಿದೆ. ನಿಮ್ಮೆಲ್ಲರ ಸಹಕಾರದಿಂದ ಮತ್ತಷ್ಟು ಸಾಧನೆ ಮಾಡುವ ಬಯಕೆಯಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ರಮಾನಂದ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ದತ್ತಿನಿಧಿ, ಅಶಕ್ತರಿಗೆ ವೈದ್ಯಕೀಯ ನೆರವಿಗೆ ಧನಸಹಾಯ ವಿತರಿಸಲಾಯಿತು. ಪೊ. ಕೆ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು . ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಸಂಚಾಲಕ ಬಿ. ರಾಮಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ವರದಿ ಮಂಡಿಸಿದರು .ಅನುಪಮಾ ಎಸ್ .ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು. ಹಳ್ನಾಡು ಪ್ರತಾಪಚಂದ್ರ ಶೆಟ್ಟಿ, ಅಕ್ಷಯ ಹೆದ್ಡೆ ಕಾರ್ಯಕ್ರಮ ನಿರೂಪಿಸಿದರು . ದಿನಕರ ಆರ್ . ಶೆಟ್ಟಿ ವಂದಿಸಿದರು. ಬಳಿಕ ಗುರುಕುಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು . ಬಸ್ರೂರು ಶ್ರೀ ಶಾರದಾ ಕಾಲೇಜು , ನಿವೇದಿತಾ ಪ್ರೌಢಶಾಲೆ, ಹಿಂದೂ ಅನುದಾನಿತ ಹಿ. ಪ್ರಾ. ಶಾಲೆ ಮತ್ತು ಗುರುಕುಲ ವಿದ್ಯಾಸಂಸ್ಥೆ ಹಾಗೂ ಸಾರ್ವಜನಿಕರಿಂದ ಬಿ.ಅಪ್ಪಣ್ಣ ಹೆಗ್ಡೆ ದಂಪತಿಯನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

8 + 7 =