ಬಸ್ರೂರು ಕಾಶೀಮಠದಲ್ಲಿ ಬ್ರಹ್ಮೋಪದೇಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕಾಶೀಮಠ ಸಂಸ್ಥಾನದ ಪ್ರಾಚೀನ ಶಾಖಾ ಮಠದಲ್ಲಿ ಶ್ರೀ ಹರಿಗುರು ಅನುಗ್ರಹದೊಂದಿಗೆ ಗೌಡ ಸಾರಸ್ವತ ಸಮಾಜದ ಹತ್ತು ಮಕ್ಕಳಿಗೆ ಬ್ರಹ್ಮೋಪದೇಶವು ಅವರ ತಂದೆ ತಾಯಿ, ಕುಟುಂಬದ ಬಂಧು ಬಳಗದವರು ಸಂಭ್ರಮ ಉಲ್ಲಾಸದೊಂದಿಗೆ ಬಸ್ರೂರು ಶ್ರೀ ಕಾಶೀಮಠದಲ್ಲಿ ನಡೆಯಿತು.

Click Here

Call us

Call us

ಚೌಲ, ಉದ್ದಿನ ಮಹೂರ್ತ, ಮಾತೃಭೋಜನ, ವಫನ, ಯಜ್ಞೋಪವೀತಧಾರಣ, ಬ್ರಹ್ಮೋಪದೇಶ, ಶ್ರೀ ವೆಂಕಟರಮಣ ದೇವರಿಗೆ ಹಾಗೂ ಉಭಯ ಬೃಂದಾವನದಲ್ಲಿ ಮಹಾಪೂಜೆ – ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Click here

Click Here

Call us

Visit Now

ಬ್ರಹ್ಮೋಪದೇಶದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರು ಅನುಗ್ರಹರಾಯಸಪತ್ರದಲ್ಲಿ ಈ ಕಾರ್ಯಕ್ರಮದಿಂದ ನೂತನ ಉಪನೀತ ವಟುಗಳು ವಿಧ್ಯಾ ವಿನಯ ಸಂಪನ್ನರಾಗಿ ಬಾಳಲಿ ಎಂದು ಹರಸಿದ್ದರು.

ಜ್ಞಾನದ ಹತ್ತಿರ ಕರೆದುಕೊಂಡು ಹೋಗುವ ಈ ಕಾರ್ಯವು ನಮ್ಮ ಸಮಾಜದ ವಟುಗಳಿಗೆ ಅಮೃತತ್ವವನ್ನು, ವಿನಯತೆಯನ್ನು ನೀಡುತ್ತದೆ. ಇದೊಂದು ಸಮಾಜ ಸೇವೆಯ ಸಾರ್ಥಕ ಕಾರ್ಯ ಎಂದು ಸೇವಾದಾರರಾದ ಗೋವಿಂದ್ರಾಯ ಆಚಾರ್ಯ ಉಲ್ಲೇಖಿಸಿದರು.

ಶ್ರೀ ದೇವ ಸನ್ನಿಧಿ ಹಾಗೂ ಶ್ರೀ ಕೇಶವೇಂದ್ರ ತೀರ್ಥ ಹಾಗೂ ಶ್ರೀ ಭುವನೇಂದ್ರ ತೀರ್ಥ ದಿವ್ಯ ಬೃಂದಾವನದ ಪುಣ್ಯ ಕ್ಷೇತ್ರದಲ್ಲಿ ಬ್ರಹ್ಮೋಪದೇಶ ಪಡೆಯುವುದು ಭಾಗ್ಯವಂತಿಕೆ ಇದು ಪ್ರತಿಯೊಂದು ವಟು ಮತ್ತು ಅವರ ಕುಟುಂಬಕ್ಕೆ ಅತೀ ಪವಿತ್ರ ಕ್ಷಣ. ಅವರು ದೇವ-ಗುರು ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಬಸ್ರೂರು ಶ್ರೀ ಕಾಶೀಮಠ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಞರಾದ ಕೆ. ಶ್ರೀಧರ ಕಾಮತ್ ಹೇಳಿದರು.

Call us

ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗೋವಿಂದ್ರಾಯ ಆಚಾರ್ಯ ಹಾಗೂ ಕುಸುಮಾ ಆಚಾರ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಹಾಗೂ ಸಹಕರಿಸಿದ ಗೌರಮ್ಮ ಮರ್ತಪ್ಪಯ್ಯ ನಾಯಕ್ ಮತ್ತು ಮಕ್ಕಳ ಸಹಕಾರವನ್ನು ಸ್ಮರಿಸಲಾಯಿತು.

ಈ ಕಾರ್ಯಕ್ರಮದ ಮೊದಲ ದಿನ ಕುಂದಾಪುರದ ವೆಂಕಟರಮಣ ಭಜನಾ ಮಂಡಳಿಯ ಕೃತಿಕಾ ಶೆಣೈ ಹಾಗೂ ಅವರ ತಂಡದಿಂದ ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಹಾಗೂ ಬ್ರಹ್ಮೋಪದೇಶದ ಸಮಯದಲ್ಲಿ ಬಸ್ರೂರು ಮಂಜುನಾಥ ಪೈ ಮುಂಬಯಿ ಇವರ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಹೊಸ ರಂಗು ನೀಡಿತು.

ಸಭಾ ಕಾರ್ಯಕ್ರಮದಲ್ಲಿ ಬಸ್ರೂರು ಶ್ರೀ ಕಾಶೀಮಠ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ದಿನೇಶ್ ಕಾಮತ್ ಕೋಟೆಶ್ವರ, ನರಸಿಂಹಮೂರ್ತಿ ಕಾಮತ್, ಶಾಂತರಾಮ ಪೈ, ಬಿ.ಗಣೇಶ ಕಾಮತ್ ನಂದಿಬೆಟ್ಟು,ರಂಗನಾಥ ಪಡಿಯಾರ್, ಸಿದ್ದಾಪುರ ಸಂಯುಕ್ತ ಜಿ.ಎಸ್.ಬಿ. ಸಮಾಜದ ಅಧ್ಯಕ್ಷರಾದ ಡಿ.ಗೋಪಿನಾಥ್ ಕಾಮತ್, ಜಿ.ಎಸ್.ಬಿ. ಸಮಾಜದ ಅಧ್ಯಕ್ಷರಾದ, ಊರ ಹಿರಿಯರಾದ ನರಸಿಂಹರಾಜ ಪ್ರಭು ಉಪಸ್ಥಿತರಿದ್ದರು.

ಸಮಾಜದ ಗಣ್ಯರಾದ ಕೆ. ರಾಧಾಕೃಷ್ಣ ಶೆಣೈ ಕುಂದಾಪುರ, ಮೋಹನದಾಸ್ ಶೆಣೈ ಕುಂದಾಪುರ, ಡಿ ಗೋಪಾಲಕೃಷ್ಣ ಕಾಮತ್ ಸಿದ್ದಾಪುರ, ಪ್ರಸನ್ನಪ್ರಭು ಕುಂದಾಪುರ, ವೇದ ಮೂರ್ತಿ ವೇದವ್ಯಾಸ ಆಚಾರ್ಯ ಗಂಗೊಳ್ಳಿ ಹಾಗೂ ಸಮಾಜದ ಇತರ ಗಣ್ಯರು ವಟುಗಳನ್ನು ಹರಸಿದರು. ದಾಮೋದರ ಆಚಾರ್ಯ ಪ್ರಸ್ತಾವನೆಗೈದು ಪಾಂಡುರಂಗ ಪೈ ಸಿದ್ದಾಪುರ ಇವರ ನಿರೂಪಣೆಯೊಂದಿಗೆ ಧಾರ್ಮಿಕ ಸಭೆ ನಡೆಯಿತು.

ಶ್ರೀ ಕಾಶೀಮಠ ವ್ಯವಸ್ಥಾಪಕ ಸಮಿತಿ ಜಿ.ಎಸ್.ಬಿ. ಸಮಾಜದ ಹತ್ತು ಸಮಸ್ತರು ಬಸ್ರೂರು, ಸಂಯುಕ್ತ ಜಿ.ಎಸ್.ಬಿ. ಸಮಾಜ ಸಿದ್ದಾಪುರ, ಬಸ್ರೂರು ಜಿ.ಎಸ್.ಬಿ ಸಭಾ, ಜಿ.ಎಸ್.ಬಿ ವೈದಿಕ ಮಂಡಳಿ ಬಸ್ರೂರು, ಜಿ.ಎಸ್.ಬಿ ಮಹಿಳಾ ಮಂಡಳಿ ಬಸ್ರೂರು ಹಾಗೂ ಯುವಜನ ಸಭಾ ಬಸ್ರೂರು ಇವರ ಸಹಕಾರದೊಂದಿಗೆ ವೇದಮೂರ್ತಿ ದಾಮೋದರ ಆಚಾರ್ಯ ಬಸ್ರೂರು ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಬ್ರಹ್ಮೋಪದೇಶ ಕಾರ್ಯಕ್ರಮವು ನೇರವೇರಿತು.

Leave a Reply

Your email address will not be published. Required fields are marked *

five × five =