ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಸೇವಾ ವಿವಿದೋದ್ದೇಶ ಸಹಕಾರಿ ಸಂಘ (ನಿ) ಬಸ್ರೂರು ಇದರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಚ್.ಎಸ್. ಹತ್ವಾರ್ರವರ ಅಧ್ಯಕ್ಷತೆಯಲ್ಲಿ ಬಿ.ಎಂ. ಶಾಲೆ ಬಸ್ರೂರು ಸಭಾಂಗಣದಲ್ಲಿ ಜರಗಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಪೂಜಾರಿ ಬಳ್ಕೂರು ವಾರ್ಷಿಕ ವರದಿಯನ್ನು ವಾಚಿಸಿದರು. ಸ್ಥಳಿಯ ಪ್ರತಿಭಾವಂತ ಪ್ರಾಥಮಿಕ ಹಾಗೂ ಫ್ರೌಡ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು. ಸದಸ್ಯರಿಗೆ ಶೇ. ೧೧ ಡಿವಿಡೆಂಟ್ ಘೋಷಿಸಲಾಯಿತು. ಹಾಜರಿದ್ದ ಎಲ್ಲಾ ಸದಸ್ಯರಿಗೆ ಎಲ್.ಇ.ಡಿ. ಬಲ್ಬ್ಗಳನ್ನು ನೀಡಿ ಸರಕಾರದ ಕಾರ್ಯಕ್ರಮವಾದ ವಿದ್ಯುತ್ ಉಳಿಸಿ ದೇಶ ಬೆಳಸಿ ಎನ್ನುವುದನ್ನು ಪ್ರೋತ್ಸಾಹಿಸಲಾಯಿತು. ನಿರ್ದೇಶಕ ಪಿ. ಜಗನ್ನಾಥ ಶೆಟ್ಟಿ ವಂದಿಸಿದರು.
ಬಸ್ರೂರು ಜನಸೇವಾ ಸಹಕಾರಿ ಸಂಘ : ಮಹಾಸಭೆ
