ಬಸ್ರೂರು ಶ್ರೀ ಕಾಶೀ ಮಠ: ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯ129ನೇ ಪುಣ್ಯ ತಿಥಿ

Call us

Call us

ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ 129ನೇ ಪುಣ್ಯ ತಿಥಿ ಮಹೋತ್ಸವ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಈ ಸಂದರ್ಭ ಶತಕಲಶಾಭೀಷೇಕ, ಸಾನಿದ್ಯ ಹವನ,ಲಘು ವಿಷ್ಣು ಹವನ,ವಾಯುಸ್ತುತಿ ಪ್ರದಕ್ಷಿಣ ನಮಸ್ಕಾರ ಮುಂತಾದ ಧಾರ್ಮಿಕ ವಿದಿ ವಿಧಾನಗಳನ್ನು ವೇ.ಮೂ ದಾಮೋದರ ಆಚಾರ್ಯ,ಬಸ್ರೂರು ಇವರ ನೇತೃತ್ವದಲ್ಲಿ ನಡೆದವು. ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನ ಮತ್ತು ಶಾಖಾ ಮಠದ ಸುಂದರೀಕರಣ ಕಾರ್ಯವನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.

Call us

Call us

Call us

ಸಂಜೆ ನಗರೋತ್ಸವ ನಡೆಯಿತು. ರಾತ್ರಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನದಲ್ಲಿ ಗುಣ ಗಾನದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಶಿಷ್ಯ ಕೋಟಿಗೆ ಗುರುವಿನ ಸ್ಮರಣೆ ಆದ್ಯ ಕರ್ತವ್ಯವಾಗಿದ್ದು, ಜೀವನದಲ್ಲಿ ಸಮಸ್ತ ಅಭಿವೃದ್ದಿಗೆ ಹಾಗೂ ಜ್ಞಾನ ಸಂಪಾದನೆಗೆ ಗುರುಸ್ಮರಣೆಯೇ ದಾರಿ. ಶ್ರೀಮತ್ ಭುವನೇಂದ್ರ ತೀರ್ಥತು ಶ್ರೀ ಧನ್ವಂತರಿಯ ಸ್ವರೂಪರೆಂದು ಪ್ರಖ್ಯಾತರಾಗಿದ್ದು,ವೇದ ವೇದಾಂಗ, ಜ್ಯೋತಿಷ್ಯದಲ್ಲಿ ಪರಿಣಿತರಾಗಿದ್ದು ವಾಯು ಮಾಧವ ಸ್ವರೂಪರೆಂದು ಪೂಜಿಸಲ್ಪಡುವರು ಎಂದು ಉಲ್ಲೇಖಿಸಿದರು. ಶ್ರೀ ಹರಿ ಗುರು ಸೇವಾ ಪ್ರತಿಷ್ಟಾನದ ಕುಂದಾಪುರ ಶ್ರೀನಿವಾಸ ಪ್ರಭು ಮತ್ತು ಸಚಿತ್ ಪೈ ಇವರನ್ನು ಶ್ರೀಗಳು ಶಾಲು ಹೊದಿಸಿ, ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

two × four =