ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿಯ ಸನ್ನಿಧಿಯಲ್ಲಿ ಇಂದು ಚಂಡಿಕಾ ಹವನ ಜರಗಿತು.
ವೇದಮೂರ್ತಿ ದಾಮೋದರ ಆಚಾರ್ಯ ನೇತೃತ್ವದಲ್ಲಿ ಹವನದ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿ, ಹರಕೆ ಸೀರೆಗಳ ಏಲಂ, ಶ್ರೀದೇವರಿಗೆ ಮಹಾಪೂಜೆ ಬಳಿಕ ಗ್ರಾಮ ಪುರುಷ ದರ್ಶನ ಸೇವೆ ಮತ್ತು ಮಹಾಸಮಾರಾಧನೆ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಸೇವಾದಾರರು, ಭಕ್ತರು ಹಾಗೂ ಊರಿನ ಹತ್ತು ಸಮಸ್ತರು ಹವನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.