ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳ ಸ್ವಾಗತ ಗೋಪುರ ಲೋಕಾರ್ಪಣೆ. ರಥಬೀದಿ ಫ್ರೆಂಡ್ಸ್ ದಶಮಾನೋತ್ಸವ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವಕರು ಕೆಟ್ಟ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡದೇ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು,ದೇವಸ್ಥಾನದ ಚಟುವಟಿಕೆಯಲ್ಲಿ ಭಾಗಿಗಳಾಗುವುದು ಒಳ್ಳೆಯ ವಿಚಾರ. ಇಂದಿನ ಕಾಲದಲ್ಲಿ ಬೌತಿಕತೆಯಿಂದ ಜೀವನ ಸಾರ್ಥಕವಾಗುತ್ತದೆ ಎನ್ನುವ ಭ್ರಮೆ ಇದೆ. ಈ ಕೆಟ್ಟ ಭಾವನೆಯಿಂದ ಹೊರಬಂದು ದೈವಿಕ ಶಕ್ತಿಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು.ಇಂತಹ ವಿಚಾರಗಳಿಂದ ಶಾಂತಿಯನ್ನು ಪಡೆಯಬಹುದು.ಧಾರ್ಮಿಕ ವಿಚಾರಧಾರೆಗಳು ಸಾವಿನ ನಂತರವೂ ನಮ್ಮನ್ನು ಜೀವಂತವಾಗಿ ಉಳಿಸುತ್ತವೆ ಎಂದು ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Call us

Call us

Visit Now

ಅವರು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ರಥಬೀದಿ ಫ್ರೆಂಡ್ಸ್ ಅವರ ದಶಮಾನೋತ್ಸವದ ಪ್ರಯುಕ್ತ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವರ ಮನ್ಮಹಾ ರಥೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸ್ವಾಗತ ಗೋಪುರವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚಿಸಿದರು.

Click here

Click Here

Call us

Call us

ಭಾರತೀಯ ಚಿಂತನೆಗಳು ಶಾಂತಿಯನ್ನು ಸಾರುತ್ತವೆ. ನಾವು ನಮ್ಮ ಸಂಸ್ಕೃತಿ, ಆಚರಣೆಯಲ್ಲಿ ಪಾಲಿಸುವ ಎಲ್ಲಾ ಶ್ಲೋಕಗಳ ಕೊನೆಯಲ್ಲಿ ಶಾಂಶಿ.. ಶಾಂತಿ.. ಶಾಂತಿ ಎಂದು ಹೇಳುತ್ತೇವೆ.ಆದರೆ ಈಗ ಶಾಂತಿಗಿಂತ ಸುಖವೇ ಮುಖ್ಯ ಎನ್ನುವ ಮನಸ್ಥಿತಿ ನಮ್ಮನ್ನು ದಾರಿ ತಪ್ಪಿಸುತ್ತಿದೆ ಎಂದವರು ಅಭಿಪ್ರಾಯ ಪಟ್ಟರು.

ಬುಧ್ಧಿವಂತರು ಲಾಭಧಾಯಕ ವಸ್ತುಗಳಾದ ಭೂಮಿ,ಚಿನ್ನ ಮುಂತಾದವುಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇವೆಲ್ಲವೂ ನಶ್ವರ. ನಮ್ಮ ಜೀವನದ ನಂತರ ಶಾಶ್ವತವಾಗಿರವುದು ನಾವು ಮಾಡಿದ ಧಾರ್ಮಿಕ ಕಾರ್ಯಗಳಿಂದ ಗಳಿಸಿದ ಪುಣ್ಯ. ಜೀವನ ಚಕ್ರದಲ್ಲಿ ಸುಖ ದುಖ ಇರುತ್ತದೆ. ಶಾಂತಿಯೊಂದೇ ಶಾಶ್ವತವಾದುದು. ಎಲ್ಲರ ಜೀವನದ ಉದ್ದೇಶ ಶಾಂತಿಯ ಹುಡುಕಾಟವಾಗಿರಬೇಕು.ಪ್ರತಿಯೊಬ್ಬನ ಜೀವನದಲ್ಲಿ ಸುಖ ಬಂದ ಮೇಲೆ ಕಷ್ಟ ಬಂದೇ ಬರುತ್ತದೆ. ಕಷ್ಟ ಬಂದ ಮೇಲೆ ಸುಖ ಇದ್ದೇ ಇರುತ್ತದೆ. ಭಾರತೀಯರೂ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗುತ್ತಲೇ ಇರುತ್ತಾರೆ ಎಂದವರು ಹೇಳಿದರು.

Click Here

ಶಾಂತಿಯನ್ನು ಕೊಡಬಹುದಾದ ದೇಶವೊಂದಿದ್ದರೆ ಅದು ಭಾರತ ಮಾತ್ರವೇ. ಇಡೀ ಪ್ರಪಂಚದಲ್ಲಿ ಪ್ರತಿಯೊಂದು ರಾಷ್ಟ್ರಗಳೂ ಆಕ್ರಮಣಕಾರಿ ಧೋರಣೆಯೊಂದಿಗೆ ಅಧಿಕಾರ ನಡೆಸುತ್ತವೆ. ಆದರೆ ಭಾರತಮಾತ್ರ ಶಾಂತಿ ಮಂತ್ರದೊಂದಿಗೆ ನಿಜವಾದ ಸಾಮರಸ್ಯಕ್ಕೆ ಅರ್ಥ ಕೊಟ್ಟಿದೆ ಎಂದವರು ಹೇಳಿದರು.ದೇವಾಲಯಗಳು ಮನಸ್ಸಿಗೆ ಶಾಂತಿ ಕೊಡುತ್ತದೆ ಹಾಗೂ ಶಕ್ತಿ,ಆತ್ಮಸ್ಥ್ಯೆಯವನ್ನು ತುಂಬುತ್ತದೆ.
ದೇವರನ್ನು ಮುಂದಿಟ್ಟುಕೊಂಡು ಜೀವನ ನಡೆಸಿದಾಗ ಮಾತ್ರ ಮುಂದಿನ ತಲೆಮಾರಿಗೆ ಒಳ್ಳೆಯದಾಗುತ್ತದೆ.

ಬಸ್ರೂರಿನ ರಥಬೀದಿ ಫ್ರೆಂಡ್ಸ್ ಕಳೆದ ಹತ್ತು ವರ್ಷಗಳಿಂದ ಮಹಾಲಿಂಗೇಶ್ವರನ ಸೇವೆ ಮಾಡುತ್ತಲೇ ಬಂದಿದೆ. ಈ ಸೇವೆ ಯುವಕರಿಗೆ ಮಾರ್ಗದರ್ಶನವಾಗಲಿ ಎಂದವರು ಹಾರೈಸಿದರು.

ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸ್ರೂರಿಗೆ ಅನಾದಿ ಕಾಲದಿಂದಲೂ ವಿಶೇಷವಾದ ಇತಿಹಾಸವಿದೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಬಸ್ರೂರು ಬಹಳಷ್ಟು ಮುಂದಿದೆ. ಮಹಾಲಿಂಗೇಶ್ವರನಿಗೆ ಸ್ವಾಗತ ಗೋಪುರ ನೀಡಿದ ರಥಬೀದಿ ಫ್ರೆಂಡ್ಸ್ ಉದ್ಧೇಶ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಬಸ್ರೂರು ಶ್ರೀ ಮಂಜುನಾಥ ಪಡಿಯಾರ್ ಅವರ ಸ್ಮರಣಾರ್ಥ ಸ್ವಾಗತ ಗೋಪುರವನ್ನು ಕೊಡುಗೆಯಾಗಿ ನೀಡಿದ ಡೆಂಟಲ್ ಲ್ಯಾಬ್ ಮತ್ತು ಕ್ಲಿನಿಕ್ ಇದರ ಮಾಲಕ ಉದ್ಯಮಿ ಬಸ್ರೂರು ಗಣೇಶ್ ಪಡಿಯಾರ್ ಮತ್ತು ಸುಮಿತ್ರಾ ಗಣೇಶ್ ಪಡಿಯಾರ್ ಸ್ವಾಗತ ಗೋಪುರ ನಿರ್ಮಾಣದ ಶಿವರಾಮ ಮೇಸ್ತ್ರಿ ಅವರನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಗೌರವಿಸಿ ಸನ್ಮಾನಿಸಿದರು.

ಬಳ್ಕೂರು ಶ್ರೀ ವಿಷ್ಣ್ಣು ಮೂರ್ತಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಧರ ಉಡುಪ, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಸಂಸ್ಕೃತ ಅದ್ಯಾಪಕ ವಿದ್ವಾನ್ ಮಾಧವ ಅಡಿಗ, ಉದ್ಯಮಿ ವಿ.ಕೆ.ಮೋಹನ್,ಬಸ್ರೂರು ರಥಬೀದಿ ಫ್ರೆಂಡ್ಸ್ ಇದರ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಪಡಿಯಾರ್, ರಥಬೀದಿ ಫ್ರೆಂಡ್ಸ್ ಇದರ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ, ಕನ್ನಡದ ಚಲನಚಿತ್ರ ನಟ ಬಾಲರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸವಿತಾ ಆಚಾರ್ಯ ಪ್ರಾರ್ಥಿಸಿದರು. ರಥಬೀದಿ ಫ್ರೆಂಡ್ಸ್ ಬಸ್ರೂರು ಇದರ ಗೌರವಾಧ್ಯಕ್ಷ ಬಸ್ರೂರು ರಾಮ್ ಕಿಶನ್ ಹೆಗ್ಡೆ ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಸಿದರು. ನಾಗೇಶ ಬಳ್ಕೂರು ದನ್ಯವಾದ ಸಮರ್ಪಿಸಿದರು. ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

14 − 3 =