ಬಸ್ರೂರು: ಶ್ರೀ ಸುಧೀಂದ್ರ ತೀರ್ಥ ಗುರುಪಾದಾನಾಂ ಆರಾಧನಾ ಮಹೋತ್ಸವ

Click Here

Call us

Call us

ಕುಂದಾಪುರ: ವೃಂದಾವನಸ್ಥ ಶ್ರೀ ಗುರುವರ್ಯರ ಆರಾಧನಾ ಮಹೋತ್ಸವವನ್ನು ಬಸ್ರೂರು ಕಾಶೀ ಮಠದಲ್ಲಿ ಶ್ರೀ ವೆಂಕಟರಮಣ ದೇವರು ಹಾಗೂ ಶ್ರೀಮತ್ ಕೇಶವೇಂದ್ರ ತೀರ್ಥರು ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ವೃಂದಾವನಗಳಲ್ಲಿ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕದೊಂದಿಗೆ, ಭಜನೆ ಸಂಕೀರ್ತನೆ, ಮಹಾಪೂಜೆ ನಡೆಯಿತು. ಸಂಜೆ ಗುರುವರ್ಯರ ಭಾವ ಚಿತ್ರದ ನಗರೋತ್ಸವದೊಡನೆ ಸಂಪನ್ನಗೊಂಡಿತು.

Call us

Call us

Click Here

Visit Now

ಗೌಡ ಸಾರಸ್ವತ ಸಮಾಜದ ಬ್ರಾಹ್ಮಣ ಸಮಾಜದ ಪ್ರಾಚೀನ ಗುರು ಪೀಠವಾದ ಶ್ರೀ ಕಾಶೀ ಮಠ ಸಂಸ್ಥಾನದ ದಕ್ಷಿಣ ಭಾರತದಲ್ಲಿನ ಮೊತ್ತ ಮೊದಲ ಶಾಖಾ ಮಠವಾದ ಬಸ್ರೂರು ಶ್ರೀ ಕಾಶೀ ಮಠದಲ್ಲಿ ಪರಂಪರೆಯ ಯತಿಶ್ರೇಷ್ಟರಾದ ಹಾಗೂ ಜಿ.ಎಸ್.ಬಿ. ಸಮುದಾಯದ ಆರಾದ್ಯ ಗುರುಗಳಾಗಿ ಎಳು ದಶಕಕ್ಕೂ ಮಿಕ್ಕಿ ಇಡೀ ಸಮಾಜದ ಅಭ್ಯುದಯಕ್ಕೆ ಕಾರಣೀಕರ್ತರಾಗಿ ಸಮಾಜವನ್ನು ಧಾರ್ಮಿಕವಾಗಿ, ನೈತಿಕವಾಗಿ, ಜನ ಪರವಾಗಿ ಆಧ್ಯಾತ್ಮದ ನೆಲೆಯಲ್ಲಿ ಮುನ್ನಡೆಸಿದವರು ಶ್ರೀ ಸುಧೀಂದ್ರ ತೀರ್ಥ ಗುರುವರ್ಯರು.

Click here

Click Here

Call us

Call us

ವೇ.ಮೂ.ದಾಮೋದರ ಆಚಾರ್ಯರು ಗುಣಗಾನದಲ್ಲಿ ಸುಧೀಂದ್ರ ತೀರ್ಥರು ಅತಿ ಧೀರ್ಘಕಾಲ ಸಮಾಜದ ಅಭ್ಯುದಯಕ್ಕಾಗಿ ನಿರಂತರ ಶ್ರಮ ವಹಿಸುತ್ತಾ, ಯತಿ ಪರಂಪರೆಗೆ ಅನುಗುಣವಾಗಿ ಜಪ, ತಪ, ಅನುಷ್ಟಾನಗಳನ್ನು ನಡೆಸುತ್ತಾ ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಶಿಕ್ಷಣ, ದಾರ್ಮಿಕ, ವೈದ್ಯಕೀಯ ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡಿಸಿದ್ದಲ್ಲದೇ ಅಂತಹ ಕಾರ್ಯಗಳನ್ನು ನಡೆಸಲು ಸಮಾಜಕ್ಕೆ ಪ್ರೇರಕದಾಯಕರಾಗಿದ್ದರು.ಶ್ರೀ ಗುರುವರ್ಯರ ಕಾಲಗತಿಯಲ್ಲಿ ಗೌಡ ಸಾರಸ್ವತ ಸಮಾಜವು ಮಹತ್ತರ ಸಾಧನೆಗಳನ್ನು ಸಾಧಿಸಲು ಸಾಧ್ಯವಾಯಿತು. ಮಾತ್ರವಲ್ಲ ಸಮಾಜವು ಆತ್ಮ ವಿಶ್ವಾಸದಿಂದ ಮುನ್ನಡೆಯಲು ಶ್ರೀ ಗುರುವರ್ಯರೇ ಕಾರಣಿಕರ್ತರೆಂದು ಗುರು ಗುಣಗಾನ ನಡೆಸಲಾಯ್ತು. ಬಸ್ರೂರು ಸುತ್ತಲಿನ ಊರಿನ ಸಮಾಜ ಭಾಂದವರು, ಯುವಜನ ಸಭಾ, ಜಿ.ಎಸ್.ಬಿ ಮಹಿಳಾವೃಂದ, ವೈದಿಕ ಮಂಡಳಿ, ಹತ್ತು ಸಮಸ್ತರು ಸೇರಿ ಈ ಆರಾಧನಾ ಮಹೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಿದರು. ಬಸ್ರೂರು ಪಾಂಡುರಂಗ ಆಚಾರ್ಯ, ಹೆಚ್. ರಂಗನಾಥ ಕಾಮತ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ವೇಮೂ. ದಾಮೋದರ ಆಚಾರ್ಯ

 

Leave a Reply

Your email address will not be published. Required fields are marked *

1 × two =