ಕುಂದಾಪುರ: ಚಲಿಸುತ್ತಿದ್ದ ಬಸ್ ನಲ್ಲಿ ಕಿಟಕಿ ಗಾಜನ್ನು ಸರಿಸುವ ನೆಪದಲ್ಲಿ ಕಿಟಕಿ ಪಕ್ಕದ ಸೀಟ್ ನಲ್ಲಿ ಕುಳಿತ್ತಿದ್ದ ಯುವತಿ ಯೋರ್ವಳಿಗೆ ಲೊಚ ಲೊಚನೆ ಮುತ್ತಿಟ್ಟ ಕಂಡಕ್ಟರ್ ಮಹಾಶಯನಿಗೆ ಸಾರ್ವಜನಿಕರು ಒಟ್ಟಾಗಿ ಮುಖ ಮೂತಿ ನೋಡದೆ ಎರ್ರಾ ಬಿರ್ರಿ ಥಳಿಸಿದ ಘಟನೆ ಕೋಟೆಶ್ವರದಲ್ಲಿ ಜರಗಿದೆ.
ಕುಂದಾಪುರದಲ್ಲಿ ಕೆಲಸ ಮಾಡುತ್ತಿರುವ ಕುಂಭಾಸಿ ಮೂಲದ ಯುವತಿಯೋರ್ವಳು ಅಸೌಖ್ಯದ ಕಾರಣ ಕೆಲಸ ಬಿಟ್ಟಿದ್ದು ಇಂದು ಕೊನೆಯ ಬಾರಿಗೆ ಕೆಲಸಕ್ಕೆ ಹೋಗಿ ಕುಂದಾಪುರದಿಂದ ಕೊಕ್ಕರ್ಣೆಗೆ ಸಾಗುವ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್ಸನ್ನು ಏರಿ ಕುಂಭಾಸಿಗೆ ಟಿಕೇಟ್ ಪಡೆದು ಕುಂತಿದ್ದಳು. ಬಸ್ಸು ಕುಂದಾಪುರ ಬಿಡುತ್ತಿದ್ದ ಹಾಗೆ ಆಗಾಗ್ಗೆ ಅವಳೆಡೆ ವಕ್ರ ದೃಷ್ಟಿ ಬೀರುತ್ತಾ ಇತರ ಪ್ರಯಾಣಿಕರಿಗೆ ಟಿಕೇಟ್ ನೀಡುತ್ತಿದ್ದ ಕೊಕ್ಕರ್ಣೆ ಮೂಲದ ಬಸ್ಸಿನ ಕಂಡಕ್ಟರ್ ಬಾಬು ಎಂಬಾತ ಕೋಟೇಶ್ವರ ಸಮೀಪಿಸುತ್ತಿದ್ದ ಹಾಗೆ ಯುವತಿ ಕುಳಿತೆಡೆ ಧಾವಿಸಿ ಬಸ್ಸಿನ ಕಿಟಕಿಯನ್ನು ಸರಿಸುವ ನೆಪದಲ್ಲಿ ಬಗ್ಗಿದವನೇ ಯುವತಿಯ ಕೆನ್ನೆ ತುಟಿಗಳಿಗೆ ಮುತ್ತಿಟ್ಟಿದ್ದನಂತೆ. ನಡೆದ ಘಟನೆಯಿಂದ ಭೂಮಿಗಿಳಿದು ಹೋದ ಯುವತಿ ಕುಂಭಾಸಿಯಲ್ಲಿ ಅಳುತ್ತಾ ಬಸ್ಸಿನಿಂದ ಇಳಿದವಳೇ ಮನೆಗೆ ಬಂದು ತನ್ನ ಅಣ್ಣನಿಗೆ ಮೊಬ್ಯಲ್ ಮೂಲಕ ವಿಷಯ ತಿಳಿಸಿದ್ದಾಳೆ ವಿಷಯ ಇತರ ಸಾರ್ವಜನಿಕರಿಗೂ ತಿಳಿದು ಆಕೆಯ ಅಣ್ಣನ ಸಹಿತ ಅವರೆಲ್ಲರೂ ಕೋಟೇಶ್ವರಕ್ಕೆ ಬಸು ಮರಳುತ್ತಲೇ ಬಸ್ಸನ್ನು ಏರಿ ನಿರ್ವಾಹಕ ಬಾಬು ಅನ್ನು ಎರ್ರಾಬಿರ್ರಿ ಥಳಿಸಿ ಸ್ಥಳಕ್ಕೆ ಆಗಮಿಸಿದ ಪೋಲಿಸರಿಗೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ತಾನು ಮಳೆ ಬರುತ್ತಿದ್ದ ಕಾರಣ ಕೇವಲ ಬಸ್ಸಿನ ಕಿಟಕಿ ಗಾಜನ್ನು ಸರಿಸಿದ್ದೇ ತನ್ನ ಮೇಲೆ ವಿನಾ: ಕಾರಣ ಅರೋಪ ಮಾಡಲಾಗಿದೆ ಎಂದು ನಿರ್ವಾಹಕ ತಿಳಿಸಿದ್ದಾನೆ. ಪ್ರಕರಣ ವು ಸಂಧಾನದಲ್ಲಿ ಇತ್ಯರ್ಥಗೊಂಡಿದೆ. ಎಂದು ಹೇಳಲಾಗಿದೆ.