ಬಹುಕೋಟಿ ವಂಚನೆ ಪ್ರಕರಣ: ಚೈತ್ರಾ ಮತ್ತು ಗ್ಯಾಂಗ್ ನ್ಯಾಯಾಲಯಕ್ಕೆ ಹಾಜರು, 10 ದಿನ ಸಿಸಿಬಿ ಕಸ್ಟಡಿಗೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.12:
ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು 5 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Call us

Click Here

Click here

Click Here

Call us

Visit Now

Click here

ಆರೋಪಿಗಳನ್ನು ಪ್ರತ್ಯೇಕವಾಗಿ ಬಂಧಿಸಿ ಬೆಂಗಳೂರಿಗೆ ಕರೆತಂದ ಪೊಲೀಸರು, ಸಿಸಿಬಿ ಕಛೇರಿಯಲ್ಲಿ ಮೊದಲ ಹಂತದ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ್ ನಾಯಕ್, ರಮೇಶ್, ಧನರಾಜ್ ಹಾಗೂ 10ನೇ ಆರೋಪಿ ಪ್ರಜ್ವಲ್ ಎಂಬಾತನನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:
► ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚನೆ: ಬಿದಿಬದಿ ವ್ಯಾಪಾರಿ, ಮಿಮಿಕ್ರಿ ಆರ್ಟಿಸ್ಟ್ಗೆ ವೇಷ ಹಾಕಿಸಿ 5 ಕೋಟಿ ವಂಚನೆ – https://kundapraa.com/?p=68995 .

ನ್ಯಾಯಾಲಯದಲ್ಲಿ ಉಡುಪಿ ಪೊಲೀಸರು ತನಗೆ ತೊಂದರೆ ಕೊಟ್ಟಿದ್ದಾರೆ. ಬಂಧನ ಮಾಡಿರುವ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲು ಅವಕಾಶ ನೀಡಿಲ್ಲ ಎಂದು ಚೈತ್ರಾ ನ್ಯಾಯಾಧೀಶರ ಮುಂದೆ ಅವಲತ್ತುಕೊಂಡು ಅಲ್ಲಿಯೇ ಕಣ್ಣೀರು ಹಾಕಿ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾಳೆ. ಆದರೆ ತನಿಕಾಧಿಕಾರಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ನಾವು ಯಾವುದೇ ರೀತಿಯಲ್ಲಿ ತೊಂದರೆ ನೀಡಿಲ್ಲ. ವಿಚಾರಣೆ ವೇಳೆ ವೀಡಿಯೋ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ನ್ಯಾಯಲಯ ಹೆಚ್ಚಿನ ತನಿಕೆಗಾಗಿ 10 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

Call us

Leave a Reply

Your email address will not be published. Required fields are marked *

one × 1 =