ಬಾಲಕನ ಥಲಸ್ಸಿಮಿಯಾ ಮೇಜರ್ ಚಿಕಿತ್ಸೆಗೆ ಬೇಕಿದೆ ಸಹೃದಯದವರ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಳಿಹೋಳೆ ಗ್ರಾಮದ ಮಾವಿನಮನೆ ಮಂಜುನಾಥ ಅವರ ಮಗನಾದ 4 ವರ್ಷದ ಸುಶಾಂತ್ ಇವನು ಕಳೆದ ನಾಲ್ಕು ವರ್ಷದಿಂದ ಥಲಸ್ಸಿಮಿಯಾ ಮೇಜರ್ ಎಂಬಂತಹ ಅಪರೂಪದ ಖಾಯಿಲೆಗೆ ತುತ್ತಾಗಿದ್ದು, ಇತ್ತಿಚೆಗೆ ತಪಾಸಣೆ ನಡೆಸಿದ ಬೆಂಗಳೂರಿನ ನಾರಾಯಣ ಹೃದಯಾಲದ ವೈದ್ಯರು ಬೋನ್ ಮ್ಯಾರೋ ಟ್ರಾಸ್ಪರೇಂಟ್ ಎನ್ನುವ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಹಾಗೂ ಈ ಚಿಕಿತ್ಸೆಯ ಸಂಪೂರ್ಣ ವೆಚ್ಚ 30 ಲಕ್ಷ ಎಂದು ತಿಳಿಸಿದ್ದಾರೆ. ಅವರ ವೈದ್ಯಕೀಯ ಚಿಕಿತ್ಸೆಗೆ ಮಾನವಿಯ ನೆರವಿನ ಅಗತ್ಯವಿದೆ.

ಸುಶಾಂತ್ ಅವರ ಕುಟುಂಬ ಬಡವರಾಗಿದ್ದು ಈಗಾಗಲೇ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಕಳೆದ 4 ವರ್ಷಗಳಿಂದ ವಿವಿಧ ರೀತಿಯ ಚಿಕಿತ್ಸೆ ನೀಡುತ್ತಾ ಬಂದಿದ್ದು ಇಷ್ಟು ದೊಡ್ಡ ಮಟ್ಟದ ಚಿಕಿತ್ಸೆ ಭರಿಸುವಲ್ಲಿ ಅಸಾಯಕರಾಗಿದ್ದು, ಸುಶಾಂತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಕೆನರಾ ಬ್ಯಾಂಕ್ ಕೊಲ್ಲೂರು ಶಾಖೆ ಉಳಿತಾಯ ಸಂಖ್ಯೆ: 01102200039683 ಐಎಫ್‌ಎಸ್‌ಸಿ ಕೋಡ್ CANRB0010175, googlepay/phonepay/ptm: 9945272627ಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9945722672.

Leave a Reply

Your email address will not be published. Required fields are marked *

4 × three =