ಬಾಳೆಬರೆ ಘಾಟ್‌ನಲ್ಲಿ ವಾಹನ ಸಂಚಾರ ನಿಷೇಧ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್ಮೆಂಟ್ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನಲೆ, ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2) & (5) ರನ್ವಯ ಏಪ್ರಿಲ್ 22 ರಿಂದ ಜೂನ್ 5 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

Call us

Call us

ವಾಹನಗಳ ಪರ್ಯಾಯ ಮಾರ್ಗ: ಕುಂದಾಪುರದಿಂದ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಕಡೆಗೆ ಹೋಗುವ ಲಘು ವಾಹನಗಳು ಕುಂದಾಪುರ-ಹೆಮ್ಮಾಡಿ-ವಂಡ್ಸೆ-ಕೊಲ್ಲೂರು-ನಿಟ್ಟೂರು ಘಾಟ್ ಮಾರ್ಗವಾಗಿ ಅಥವಾ ಕುಂದಾಪುರ-ಕೋಟೇಶ್ವರ-ಹಾಲಾಡಿ-ಆಗುಂಬೆ ಮಾರ್ಗವಾಗಿ ಅಥವಾ ಕುಂದಾಪುರ-ಬಸ್ರೂರು-ಹುಣ್ಸೆಮಕ್ಕಿ-ಹಾಲಾಡಿ-ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ತಲುಪಬಹುದು.

Call us

Call us

ಕುಂದಾಪುರದಿಂದ ತೀರ್ಥಹಳ್ಳಿಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ-ರಿಪ್ಪನ್ಪೇಟೆ ಮೂಲಕ ತೀರ್ಥಹಳ್ಳಿ ತಲುಪಬಹುದು.

ಕುಂದಾಪುರದಿಂದ ಶಿವಮೊಗ್ಗ ಕಡೆಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ ಮಾರ್ಗವಾಗಿ ಶಿವಮೊಗ್ಗ ತಲುಪುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

five × five =