ಬಿಎಸ್-4 ವಾಹನ ನೋಂದಣಿಗೆ ಮಾರ್ಚ್ 31 ಕೊನೆಯ ದಿನಾಂಕ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಏಪ್ರಿಲ್ 1 ರಿಂದ ಭಾರತ್ ಸ್ಟೇಜ್-6 (ಬಿಎಸ್-6) ವಾಹನಗಳನ್ನು ಮಾತ್ರ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೋಂದಣಿ ಮಾಡಲಾಗುವುದು. ಸರ್ವೋಚ್ಚ ನ್ಯಾಯಾಲಯ ಹಾಗೂ ಸಾರಿಗೆ ಆಯುಕ್ತರ ಆದೇಶದನ್ವಯ ಏಪ್ರಿಲ್ 1 ರಿಂದ ಭಾರತ್ ಸ್ಟೇಜ್-4 (ಬಿಎಸ್-4) ಮಾಪನದ ವಾಹನ ಮಾರಾಟ ಹಾಗೂ ನೋಂದಣಿ ಮಾಡುವಂತಿಲ್ಲ.

Click Here

Call us

Call us

ಬಿಎಸ್-4 ಮಾಪನದ ವಾಹನಗಳನ್ನು ಖರೀದಿಸಿ, ಇದುವರೆಗೂ ನೋಂದಣಿ ಮಾಡಿಸಿಕೊಳ್ಳದೇ ಇರುವವರು, ವಾಹನಗಳ ದಾಖಲೆಗಳನ್ನು ಸಲ್ಲಿಸಿ ಮಾರ್ಚ್ 31 ರ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಜಿಲ್ಲೆಯ ಹಲವು ಜೆಸಿಬಿ ಎಕ್ಸವೇಟರ್, ಕ್ರೇನ್ ಹಾಗೂ ಇನ್ನಿತರ ಸಾರಿಗೆ / ಖಾಸಗಿ ವಾಹನಗಳು ಇದುವರೆಗೂ ನೋಂದಾಯಿಸದೇ ಇರುವುದು ಗಮನಕ್ಕೆ ಬಂದಿದ್ದು, ಅಂತಹ ವಾಹನಗಳ ಮಾಲೀಕರು, ತಮ್ಮ ವಾಹನಗಳ ದಾಖಲಾತಿ ಸಲ್ಲಿಸಿ, ಮಾರ್ಚ್ 31 ರ ಒಳಗೆ ನೋಂದಾಯಿಸಿಕೊಳ್ಳಬೇಕು.

Click here

Click Here

Call us

Visit Now

ಏಪ್ರಿಲ್ 1 ರಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭಾರತ್ ಸ್ಟೇಜ್-6 (ಬಿಎಸ್-6) ವಾಹನಗಳನ್ನು ಮಾತ್ರ ನೋಂದಣಿ ಮಾಡಲಾಗುವುದು. ಈಗಾಗಲೇ ತಾತ್ಕಾಲಿಕ ನೋಂದಣಿ ಹೊಂದಿದ್ದರೂ ಸಹ ಅಂತಹ ವಾಹನಗಳನ್ನು ಮಾರ್ಚ್ 31 ರ ಒಳಗೆ ನೋಂದಾಯಿಸಿಕೊಳ್ಳಬೇಕು. ನಂತರ ನೋಂದಣಿ ರಹಿತ ಭಾರತ್ ಸ್ಟೇಜ್-4(ಬಿಎಸ್-4) ವಾಹನಗಳು ರಸ್ತೆಯಲ್ಲಿ ಓಡಾಡುವುದು ಕಂಡುಬಂದಲ್ಲಿ ಅಂತಹ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

2 × one =