ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರನ್ನು ತಲುಪುವ ಆಶಯದ ಬೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಂಟಿಸುವ ಕಾರ್ಯಕ್ರಮಕ್ಕೆ ವಂಡ್ಸೆ ಜಿ.ಪಂ ವ್ಯಾಪ್ತಿಯ ಕಕುಂಜೆ ಗ್ರಾಮದ ನಾಲ್ಕು ಬೂತ್‌ಗಳಲ್ಲಿ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಂಟಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದನ್ನು ಪ್ರತಿ ಬೂತ್‌ನ ಜನರಿಗೆ ತಲುಪಿಸುವ ಕಾರ್ಯಗಳು ಪ್ರತಿ ಬೂತ್ ಅಧ್ಯಕ್ಷರ ತಂಡದಿಂದ ಆಗಬೇಕು. ಈ ಮೂಲಕ ಯೋಜನೆಗಳು ಅರ್ಹ ಜನರನ್ನು ತಲುಪಬೇಕು. ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರೇ ನಮಗೆ ಶಕ್ತಿ. ಪ್ರಧಾನಿ ಮೋದಿಯವರ ನುಡಿಯಂತೆ ‘ಬೂತ್ ಗೆದ್ದರೆ ದೇಶ ಗೆಲ್ಲುತ್ತೇವೆ’ ಎನ್ನುವಂತೆ ಬೂತ್ ಸಶಕ್ತವಾಗಬೇಕು. ಎಲ್ಲಾ ಚುನಾವಣೆಗಳಲ್ಲೂ ಬೂತ್ ಕಾರ್ಯಕರ್ತರ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು.
ಕಕುಂಜೆ ಗ್ರಾಮದ ನಾಲ್ಕು ಬೂತ್‌ಗಳ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದಯ್ ಪೂಜಾರಿ ಭಟ್ರಾಡಿ, ಸೀತಾರಾಮ್ ಶೆಟ್ಟಿ, ಪ್ರಸಾದ್ ಗಾಣಿಗ ಹಾಗೂ ಮಂಜುನಾಥ್ ಪೂಜಾರಿ ತಂಡಕ್ಕೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಬೈಂದೂರು ಮಂಡಲ ಪ್ರಭಾರಿ ಕಿಶೋರ್ ಕುಮಾರ್ ಕುಂದಾಪುರ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜೆಡ್ಡು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ್ ಖಾರ್ವಿ, ರಾಜೇಶ್ ಕಾವೇರಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಾಗರಾಜ್ ಶೆಟ್ಟಿ ನಾರ್ಕಳಿ, ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ಸಂತೋ? ಪೂಜಾರಿ, ಸದಸ್ಯ ಬಿಜ್ರಿ ರಾಜೀವ್ ಶೆಟ್ಟಿ, ಸುಕುಮಾರ ಮೊಗವೀರ ಶ್ಯಾರಳ ಮತ್ತಿತರರು ಉಪಸ್ಥಿತರಿದ್ದರು.
