ಬಿದ್ಕಲ್ಕಟ್ಟೆ: ಟ್ರಕ್-ಬೈಕ್ ಡಿಕ್ಕಿ. ಬೈಕ್ ಸವಾರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬಿದ್ಕಲ್ಕಟ್ಟೆ ಗಾವಳಿ ತಿರುವಿನಲ್ಲಿ ಶನಿವಾರ ಬೆಳಗ್ಗೆ ಟ್ರಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ. ಹೋಟೆಲ್ ಮ್ಯಾನೇಜ್ಮೆಂಟ್ ಪೂರೈಸಿ, ಮಣಿಪಾಲ ಖಾಸಗಿ ಹೋಟೆಲ್ ಉದ್ಯೋಗಿ ಹಾಲಾಡಿ ನಿವಾಸಿ ಶಂಕರ ಕುಲಾಲ್ ಎಂಬವರ ಪುತ್ರ ಶಬರೀಶ್ (20) ಮೃತಪಟ್ಟ ಯುವಕ. ಟ್ರಕ್ ಬೈಕ್‌ಗೆ ಢಿಕ್ಕಿ ಹೊಡೆದು, ಗಂಭೀರ ಗಾಯಗೊಂಡ ವ್ಯಕ್ತಿಯ ಸ್ಥಳೀಯರು ಮಣಿಪಾಲ ಆಸ್ಪ್ರತ್ರೆಗೆ ಸಾಗಿಸಲು ಪ್ರಯತ್ನ ನಡೆಸಿದ್ದು, ಶಬರೀಶ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಶಬರೀಶ್ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅಪಘಾತ ನಡೆದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

two − two =