ಬಿದ್ಕಲ್‌ಕಟ್ಟೆ: ಕಲಿಕಾ ಪ್ರದರ್ಶನ ಮತ್ತು ಕೊಡುಗೆ ಸ್ವೀಕಾರ ಸಮಾರಂಭ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಲಯದ ಬಿದ್ಕಲ್ ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ತಿಂಗಳು ನಡೆಯುವ ವಿನೂತನ ಮಾಸಿಕ ಕಾರ್ಯಕ್ರಮವಾದ ತಿಂಗಳ ಕಲಿಕಾ ಪ್ರದರ್ಶನದ ೫ನೇ ಕಾರ್ಯಕ್ರಮ ’ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ದಾನಿಗಳಿಂದ ವಿವಿಧ ಕೊಡುಗೆ ಸ್ವೀಕರಿಸುವ ಪ್ರಥಮ ಸಮಾರಂಭವು ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಸಹಯೋಗದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲ.ಉದಯ ಶೆಟ್ಟಿಯವರು ೫ನೇ ತಿಂಗಳ ಕಲಿಕಾ ಪ್ರದರ್ಶನಕ್ಕೆ ಚಾಲನೆ ನೀಡಿದರು.

Click Here

Call us

Call us

Visit Now

ಪ್ರಾಜೆಕ್ಟರ್, ಲ್ಯಾಪ್‌ಟಾಪ್ ಕೊಡುಗೆ ನೀಡಿದ ಸಂಧ್ಯಾ ಸುಬ್ರಹ್ಮಣ್ಯ ಅಡಿಗ ಹಾಗೂ ದಾನಿ, ನಿವೃತ್ತ ಮುಖ್ಯೋಪಾಧ್ಯಾಯ ಎಚ್ ಸುಬ್ಬಣ್ಣ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಮಾತನಾಡಿದ ಲಯನ್ಸ್ ೩೧೭ ಸಿ ಜಿಲ್ಲಾ ಗವರ್ನರ್ ಲ. ದಿವಾಕರ ಶೆಟ್ಟಿ ಯವರು ’ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯ ಜನಸಮುದಾಯ ಕೈಜೋಡಿಸುವ ಮೂಲಕ ಗ್ರಾಮೀಣ ಮಕ್ಕಳ ಆಂಗ್ಲ ಮಾಧ್ಯಮ ಶಿಕ್ಷಣದ ಕನಸನ್ನು ನನಸಾಗಿಸಿರುವುದು ಸ್ವಾಗತಾರ್ಹ’ ಎನ್ನುತ್ತಾ ದಾನಿಗಳಿಗೆ ಶುಭ ಹಾರೈಸಿದರು.

Click here

Click Here

Call us

Call us

ಈ ಸಂದರ್ಭದಲ್ಲಿ ಲಯನ್ ವಲಯಾಧ್ಯಕ್ಷರಾದ ಯು.ರತ್ನಾಕರ ಶೆಟ್ಟಿ, ಲಯನ್ ಪದಾಧಿಕಾರಿಗಳಾದ ಸೂರ್ಯಪ್ರಕಾಶ್ ದಾಮ್ಲೆ, ರಾಜೀವ ಶೆಟ್ಟಿ, ಅತುಲ್‌ಕುಮಾರ್ ಶೆಟ್ಟಿ, ಮೊಳಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾದ ವಾಣಿ ಆರ್ ಶೆಟ್ಟಿ, ಹಾರ್ದಳ್ಳಿ-ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷರಾದ ರಾಜೀವಿ, ಹೊಂಬಾಡಿ ಮಂಡಾಡಿ ಗ್ರಾ.ಪಂ. ಅಧ್ಯಕ್ಷರಾದ ಜ್ಯೋತಿ, ಸ್ಥಳೀಯ ಗ್ರಾ.ಪಂ. ಸದಸ್ಯರಾದ ಮನೋಜ್ ಕುಮಾರ್ ಶೆಟ್ಟಿ,ದಾನಿಗಳಾದ ಸಂಧ್ಯಾ ಸುಬ್ರಹ್ಮಣ್ಯ ಅಡಿಗ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್. ಸುಬ್ಬಣ್ಣ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುಧಾಕರ,ಹಳೆವಿದ್ಯಾರ್ಥಿ ಸಂಘದ ಖಜಾಂಚಿ ದಿವಾಕರ ಆಚಾರ್, ಹಿರಿಯರಾದ ನಾರಾಯಣ ಶೆಟ್ಟಿ, ಮುಖ್ಯೋಪಾಧ್ಯಾಯರಾದ ನಾಗರತ್ನ, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ರಮಣಿ, ಶಿ ಜ್ಯೋತಿಲಕ್ಷ್ಮಿ, ಚಿತ್ರಾ, ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಸುಪ್ರೀತಾ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಮುಖ್ಯೋಪಾಧ್ಯಾಯರಾದ ನಾಗರತ್ನ ಸ್ವಾಗತಿಸಿದರೆ, ಕೊನೆಯಲ್ಲಿ ಎಸ್.ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ ವಂದಿಸಿದರು. ಸಹಶಿ ಸತೀಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

eleven − four =