ಬಿದ್ಕಲ್‌ಕಟ್ಟೆ : ‘ಚಾರಣ’ ಶಾಲಾ ಮಾಸ ಪತ್ರಿಕೆ ಅನಾವರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಶಾಲೆ ಸಮುದಾಯದ ಅವಿಭಾಜ್ಯ ಅಂಗ. ಶಾಲಾ ಚಟುವಟಿಕೆಗಳು ವೈವಿದ್ಯಪೂರ್ಣವಾದಷ್ಟೂ ಸಮುದಾಯದ ಬೆಂಬಲ ಹೆಚ್ಚುತ್ತಾ ಸಾಗುತ್ತದೆ. ಈ ದಿಸೆಯಲ್ಲಿ ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಪ್ರತಿ ತಿಂಗಳೂ ಅನಾವರಣಗೊಳಿಸುತ್ತಿರುವ ಚಾರಣ ಮಾಸಪತ್ರಿಕೆಯ ಅನಾವರಣ, ತಿಂಗಳ ಕಲಿಕಾ ಪ್ರದರ್ಶನ ಹಾಗೂ ಸರ್ವ ಪೋಷಕರ ಸಭೆ ಒಂದು ಅತ್ಯುತ್ತಮ ಸೃಷ್ಟಿಶೀಲ ಚಟುವಟಿಕೆ. ಸರಕಾರಿ ಶಾಲೆಗಳ ಸಬಲೀಕರಣ ಮತ್ತು ದಾಖಲಾತಿಯ ಹೆಚ್ಚಳಕ್ಕೆ ಶಾಲಾ ಶಿಕ್ಷಕರ ಈ ಬಗೆಯ ಉನ್ನತ ಚಿಂತನೆಯ ವಿನೂತನ ಚಟುವಟಿಕೆಗಳು ಸಹಕಾರಿ.’ ಎಂದು ಕರಾವಳಿ ಬಂಟರ ಬಳಗ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವೀಂದ್ರ ಶೆಟ್ಟಿ ಹಟ್ಟಿಯಂಗಡಿ ಅಭಿಪ್ರಾಯ ಪಟ್ಟರು.

Call us

Call us

Visit Now

ಅವರು ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಾಧ್ಯಮ ವರದಿಗಾರರಾದ ಶ್ರೀ ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ, ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಮತ್ತು ಅಮ್ಮಾ ಪಬ್ಲಿಕೇಷನ್ಸ್ ಇವರು ಪ್ರಾಯೋಜಿಸಿದ ಚಾರಣ ಮಾಸ ಪತ್ರಿಕೆಯ 14 , 15ನೇ ಸಂಚಿಕೆಗಳನ್ನು ಅನಾವರಣಗೊಳಿಸಿ ಬಳಿಕ ಸರ್ವ ಪೋಷಕರ ಸಭೆಯನ್ನುದ್ಧೇಶಿಸಿ ಮಾತನಾಡಿ, ಸೊರಗುತ್ತಿರುವ ಕನ್ನಡ ಶಾಲೆಯನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುತ್ತಿರುವ ಎಲ್ಲ ಪೋಷಕರನ್ನು ಅಭಿನಂದಿಸಿದರು.

Click here

Call us

Call us

ಸಮಾರಂಭದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ವೀಕ್ಷಕರಾದ ಶ್ರೀ ದಿನೇಶ್ ಪ್ರಭು, ಕತ್ತಲಕೋಣೆ ಸಿನಿಮಾ ನಿರ್ದೇಶಕರಾದ ಶ್ರೀ ಸಂದೇಶ ಶೆಟ್ಟಿ ಆಜ್ರಿ, ಹೆಗ್ಗದ್ದೆ ಪಬ್ಲಿಕೇಷನ್ಸ್ ಮತ್ತು ಸಿರಿ ಮೊಬೈಲ್ ಟಿ.ವಿ.ಯ ನಿರ್ದೇಶಕರಾದ ಶ್ರೀ ಸಂದೀಪ ಶೆಟಿ ಹೆಗ್ಗದ್ದೆ, ಪತ್ರಿಕಾ ಪ್ರಾಯೋಜಕರಾದ ಪತ್ರಕರ್ತ ಶ್ರೀ ಕೆ.ಸಂತೋಷ ಶೆಟ್ಟಿ ಮೊಳಹಳ್ಳಿ, ವಾಟ್ಸ್‌ಅಪ್ ಖ್ಯಾತಿಯ ಶ್ರೀ ರಾಮ ಶೆಟ್ಟಿ, ಕೊಡ್ಲಾಡಿ ಅಶ್ವಿತ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಹೆಬ್ಬಾರ್, ಸಹಶಿಕ್ಷಕರುಗಳಾದ ಶ್ರೀ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಶ್ರೀಮತಿ ಜ್ಯೋತಿಲಕ್ಷ್ಮೀ, ಶ್ರೀಮತಿ ಚಿತ್ರಾ , ಗೌರವ ಶಿಕ್ಷಕಿಯರಾದ ಶ್ರೀಮತಿ ಮಹಾಲಕ್ಷ್ಮೀ, ಶ್ರೀಮತಿ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕಿ ನಾಗರತ್ನ ಸ್ವಾಗತಿಸಿದರೆ, ಚಾರಣದ ಸಂಪಾದಕರಾದ ಸತೀಶ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ರಮಣಿ ವಂದಿಸಿದರು. ಸಹ ಶಿಕ್ಷಕಿ ಚಿತ್ರಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

Your email address will not be published. Required fields are marked *

thirteen − twelve =