ಬಿದ್ಕಲ್‌ಕಟ್ಟೆ ಶಾಲಾ ಸಾಹಿತ್ಯ ಸಂಚಿಕೆ ‘ಚಾರಣ’ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ದಂಪತಿ ಚಿತ್ರಾ-ಆನಂದ ಮೊಗವೀರ ಅವರು ತಮ್ಮ ಪುತ್ರಿ ಆದ್ಯಾಳ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿ, ರೂಪಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ಮೂರನೇ ಸಂಪುಟದ ಮೊದಲ ಸಂಚಿಕೆ ಅನಾವರಣ, ಶಾಲಾ ಹಳೆವಿದ್ಯಾರ್ಥಿ ಸುದೀಪ ಆಚಾರ್ಯ ಅವರ ಚೊಚ್ಚಲ ಕೃತಿ ಪರಿಚಯ ಕವನಸಂಕಲನ ವಿತರಣೆ, ತಿಂಗಳ ಕಲಿಕಾ ಪ್ರದರ್ಶನ, ಸರ್ವಪೋಷಕರ ಸಭೆ ಹಾಗೂ ಸಂವಿದಾನ ಓದು ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮ ಅಧ್ಯಕ್ಷತೆಯಲ್ಲಿ ಜರುಗಿತು.

ನಿವೃತ್ತ ತಹಸೀಲ್ದಾರರಾದ ಶ್ರೀ ಆನಂದ ಶೆಟ್ಟಿಯವರು ಉಪಸ್ಥಿತರಿದ್ದು, ಚಾರಣ ಸಂಚಿಕೆಯನ್ನು ಅನಾವರಣ ಗೊಳಿಸಿ ಚಾರಣ ಸಂಚಿಕೆಯ ಮಹತ್ವ ಮತ್ತು ಅದು ವಿದ್ಯಾರ್ಥಿಗಳ ಕಲಿಕೆಗೆ ಹೇಗೆ ಪೂರಕವಾಗಿದೆ ಎಂಬುದನ್ನು ಸವಿಸ್ತಾರವಾಗಿ ಮಕ್ಕಳ ಮನಮುಟ್ಟುವಂತೆ ತಿಳಿಸಿದರು.

ಶಾಲೆಯ ಎಲ್ಲ ಶಿಕ್ಷಕರು ಜೊತೆಗೂಡಿ ಸಂವಿದಾನ ಓದು ಕಾರ್ಯಕ್ರಮವನ್ನು ನಡೆಸಿಕೊಟ್ಟು, ಸಂವಿದಾನದ ಆಶಯ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುಧಾಕರ, ಪರಿಚಯ ಕವನ ಸಂಕಲನದ ಕವಿ ಸುದೀಪ ಆಚಾರ್ಯ ಬಿದ್ಕಲ್‌ಕಟ್ಟೆ, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಚಿತ್ರಾ, ಜ್ಯೋತಿಲಕ್ಷ್ಮೀ, ಶ್ಯಾಮಲಾ ಅವಕಾಶ ಫೌಂಡೇಷನ್ ಶಿಕ್ಷಕಿ ಪವಿತ್ರಾ ಹೆಗ್ಡೆ, ಅತಿಥಿ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ ಉಪಸ್ಥಿತರಿದ್ದರು.

ಆರಂಭದಲ್ಲಿ ಸಹಶಿಕ್ಷಕಿ ರಮಣಿ ಶೆಟ್ಟಿ ಸ್ವಾಗತಿಸಿದರೆ, ಸಹಶಿಕ್ಷಕ ಸತೀಶ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೊನೆಯಲ್ಲಿ ವಂದಿಸಿದರು. ಸಹಶಿಕ್ಷಕಿ ಚಿತ್ರಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

seven + 12 =