ಬಿಲ್ಲವ ಸೇವಾ ಸಂಘ ಮುಂಬಯಿ ನೂತನ ಕಾರ್ಯದರ್ಶಿಯಾಗಿ ಅಶೋಕ ಎನ್. ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬಯಿ: ಮುಂಬಯಿ ಮಹಾನಗರದ ಪ್ರತಿಷ್ಠಿತ ಸಮುದಾಯ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಎನ್. ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅಶೋಕ ಎನ್. ಪೂಜಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವವಿರುವ ಇವರು ಸಂಘದ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುತ್ತಾರೆ ಎಂದು ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ತಿಳಿಸಿರುತ್ತಾರೆ.

ಬೈಂದೂರು ತಾಲೂಕಿನ ಪಡುಕೋಣೆಯವರಾದ ಅಶೋಕ ಎನ್. ಪೂಜಾರಿ ಕಳೆದೆರಡು ದಶಕಗಳಿಂದ ಮುಂಬಯಿ ಮಹಾನಗರದಲ್ಲಿ ನೆಲೆಸಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮುದಾಯ ಸಂಘಟನೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಸಂಘದ ಕ್ರಿಯಶೀಲ ಸದಸ್ಯನಾಗಿರುವುದಲ್ಲದೆ ಒರ್ವ ಸಂಘಟಕನಾಗಿ ನಿಷ್ಠಾವಂತ ಸಮಾಜಸೇವಕನಾಗಿ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

five + 7 =