ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ ಮತ್ತು ಬೀಜಾಡಿ ಗ್ರಾಮ ಪಂಚಾಯತ್ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಬೀಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೀಜಾಡಿ ಗ್ರಾಮ ಪಂಚಾಯತ್‌ನ ವಿವಿಧ ಸ್ಥಳಗಳಲ್ಲಿ ಜಾನುವಾರು ಆರೋಗ್ಯ ಮತ್ತು ಬಂಜೆತನ ನಿವಾರಣಾ ಶಿಬಿರ ಜರುಗಿತು.
ಬೀಜಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸುಮತಿ ಮೊಗವೀರ ಶಿಬಿರ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ವಾದಿರಾಜ ಹೆಬ್ಬಾರ್, ಮಂಜುನಾಥ ಕುಂದರ್, ವಿಶ್ವನಾಥ ಮೊಗವೀರ, ಶೇಖರ ಚಾತ್ರಬೆಟ್ಟು, ಅನಿಲ್, ಜಸಿಂತಾ ಡಿ ಮೆಲ್ಲೋ, ಪಶುಪಾಲನೆ ಇಲಾಖೆಯ ಪಶು ವೀಕ್ಷಕರಾದ ಮಾಚ ಬಿಲ್ಲವ, ದೇವಾನಂದ್, ಕೃತಕ ಗರ್ಭಧಾರಣಾ ಕಾರ್ಯಕರ್ತರ ಕೆ.ಗಣೇಶ್ ಐತಾಳ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಕುಂದಾಪುರ ಪಶುವೈದ್ಯ ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಾಬಣ್ಣ ಪೂಜಾರಿ ನೇತೃತ್ವದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಕರೆತರಲಾಗಿದ್ದ ಸುಮಾರು ನೂರಕ್ಕೂ ಮಿಕ್ಕಿದ ಜಾನುವಾರುಗಳಿಗೆ ಸೂಕ್ತ ತಪಾಸಣೆಯೊಂದಿಗೆ, ಶ್ವಾನಗಳಿಗೂ ಉಚಿತ ರೇಬಿಸ್ ಲಸಿಕೆ ಹಾಗೂ ಉಚಿತ ಔಷಧಿಗಳನ್ನು ನೀಡಲಾಯಿತು.
