ಬೀಜಾಡಿ ಜಿಪಂ ಕ್ಷೇತ್ರ: ಹೊಸ ಬೀಜಾಡಿ ಜಿಪಂ ಮುಂದಿದೆ ಬೆಟ್ಟದಷ್ಟು ಸವಾಲು

Call us

ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ
ಕುಂದಾಪುರ: ಉಡುಪಿ ಜಿಲ್ಲೆಯ ಹೊಸ ಜಿಲ್ಲಾ ಪಂಚಾಯಿತಿ ಬೀಜಾಡಿ ಮುಂದಿದೆ ಬೆಟ್ಟದಷ್ಟು ಸವಾಲು. ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಆಯ್ಕೆಯಾಗುವ ಮಹಿಳೆ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ಬೀಜಾಡಿಯಲ್ಲಿ ಹಿಂದೆ ಗೇರು ಮರದ ಹೊಲವಿದ್ದು, ಸಾಕಷ್ಟು ಗೇರು ಬೀಜವಿದ್ದ ಕಾರಣ ಬೀಜದ ಹಾಡಿ ಎಂಬ ಹೆಸರಿತ್ತು. ಬರುಬರುತ್ತಾ ಬೀಜದ ಹಾಡಿ ಹೋಗಿ ಬೀಜಾಡಿ ಎಂಬ ಹೆಸರು ಶಾಶ್ವತ ಆಯಿತು.

Call us

Call us

post-election-Beejadyಹಿಂದೆ ಗೋಪಾಡಿ-ಬೀಜಾಡಿ ಸೇರಿ ಒಂದೆ ಗ್ರಾಮ ಪಂಚಾಯತಿ ಆಗಿದ್ದು, ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ಗೋಪಾಡಿ ಮತ್ತು ಬೀಜಾಡಿ ಸ್ವತಂತ್ರ ಗ್ರಾಮಗಳಾಗಿ ಪುನರ್ ವಿಂಗಡನೆಯಾಯಿತು. ಗೋಪಾಡಿ ಗ್ರಾಪಂ.ಗೆ ಹಿಂದೆ ಇದ್ದ ಕಟ್ಟಡ, ಸಭಾಭವನ ಸಿಕ್ಕಿದ್ದು, ಬೀಜಾಡಿ ಗ್ರಾಪಂಗೆ ಕಟ್ಟಡವೇ ಇಲ್ಲದೆ ತಾತ್ಕಾಲಿಕ ವ್ಯವಸ್ಥೆ ಅಡಿ ಕೆಲಸ ನಿರ್ವಹಿಸುತ್ತಿದೆ.

ಬೀಜಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಈ ಭಾರಿ ಮಹಿಳಾ ಮೀಸಲಾತಿ ಬಂದಿರುವುದರಿಂದ ಕಾಂಗ್ರೆಸ್ ಬಿಜೆಪಿ ನಡುವೆ ಸ್ವಜಾತಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ಕಾಂಗ್ರೆಸ್‌ನಿಂದ ಜ್ಯೋತಿ ಎ.ಶೆಟ್ಟಿ ಸ್ವರ್ಧಿಸುತ್ತಿದ್ದರೇ. ಬಿಜೆಪಿ ಪಕ್ಷದಿಂದ ಶ್ರೀಲತಾ ಸುರೇಶ್ ಶೆಟ್ಟಿ ಸ್ವರ್ಧಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ

Call us

Call us

ಹೊಸದಾಗಿ ರಚನೆಯಾದ ಬೀಜಾಡಿ ಜಿಪಂನಲ್ಲಿ ಎರಡು ಪ್ರಸಿದ್ಧ ಯಾತ್ರಾಸ್ಥಳವಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಮತ್ತು ಕಾಳಾವರ ಶ್ರೀ ಮಾಹಾ ಕಾಳಿಂಗೇಶ್ವರ ದೇವಸ್ಥಾನವಿದೆ. ಬೀಜಾಡಿ ಜಿಪಂ ಹೆಚ್ಚು ಕರಾವಳಿ ತೀರ ಅವಲಂಬಿಸಿದ್ದು, ಭತ್ತ ಪ್ರಧಾನ ಕೃಷಿಯಾಗಿದ್ದು, ಬೀಜಾಡಿ ಜಿಪಂ ವ್ಯಾಪ್ತಿಯಲ್ಲಿ ಯಾವ ಹೊಳೆಯೂ ಹರಿಯದಿರುವುದು ವಿಶೇಷ. ಮಳೆ ನೀರು ಸಂಗ್ರಹಿಸಿ, ನೀರಾಶ್ರಯ ಮಾಡಿಕೊಳ್ಳುವ ಅನಿವಾರ್ಯವೂ ಇದೆ.

ಮಳೆ ನೀರು ಸಂಗ್ರಹಕ್ಕಾಗಿಯೇ ಬೀಜಾಡಿ ಜಿಪಂನಲ್ಲಿ ಅತೀ ಹೆಚ್ಚು ಕೆರೆಗಳ ನಿರ್ಮಾಣವಾಗಿದ್ದು, ಎಲ್ಲಾ ಕೆರಗಳಲ್ಲಿ ಹೂಳು ತುಂಬಿದ್ದು, ಹೊಸ ಜಿಪಂ ಸದಸ್ಯರ ಮುಂದೆ ಸವಾಲಾಗಿ ನಿಲ್ಲಲಿದೆ. ಹಾಗೆ ಪರಶುರಾಮ ಸೃಷ್ಟಿಯ ಎರಡು ಬೃಹತ್ ಕೊಳಗಳಿದ್ದು, ಒಂದು ಕೊಳೆ ಹೂಳೆತ್ತಿ ರಿಪೇರಿ ಮಾಡಲಾಗಿದ್ದರೂ ಮತ್ತೊಂದು ಕೊಳೆ ಜೀರ್ಣಾವಸ್ಥೆಯಲ್ಲಿದೆ. ಹಾಗೆ ಮಳೆಗಾಲದಲ್ಲಿ ನೀರು ಹರಿವ ತೋಡುಗಳಲ್ಲಿ ಹೂಳು ತುಂಬಿ ಪುಟ್ಟ ಮಳೆಗೂ ನೆರೆ ಸೃಷ್ಟಿಯಾಗುವುದು ಮತ್ತೊಂದು ದೊಡ್ಡ ಸವಾಲು. ಒಟ್ಟಾರೆ ಹೊಸ ಜಿಪಂ ಎದುರು ಸವಾಲುಗಳ ಪಟ್ಟಿಯೇ ಇದೆ. ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ

ಸಮಸ್ಯೆ :
*ಕೃತಕ ನೆರೆ ಹಾವಳಿ, ರಾಜಕಾಲುವೆಯಲ್ಲಿ ತುಂಬಿದ ಹೂಳು. ಚಿಕ್ಕ ಮಳೆಗೂ ಮನೆ ಒಳಗೆ ನುಗ್ಗುವ ಮಳೆ ನೀರು. ಕೃಷಿ ಭೂಮಿ ಜಲಾವೃತ್ತ.
*ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಜನರ ಪಾಲಿಗೆ ಮರೀಚಿಕೆ. ಹೊಲ, ಸ್ಲಾಬ್ ಕಟ್ಟಡವಿದ್ದವರಿಗೂ ಅಂತ್ಯೋದಯ ಬಿಪಿಎಲ್ ಕಾರ್ಡ್, ಬಡವರಿಗೆ ಇನ್ನೂ ಸಿಗದ ಬಿಪಿಎಲ್ ಕಾರ್ಡ್.
*ಬೀಜಾಡಿ ಗ್ರಾಪಂಗೆ ದೊರಕದ ಕಟ್ಟಡ. ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಾಜಕ ಸಮಸ್ಯೆ. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ.
*ಎಲ್ಲೆಲ್ಲಿ ಬಾವಿ ತೆರೆದು ಮುಚ್ಚಿ ಕುಡಿಯುವ ನೀರಿಗಾಗಿ ಪೋಲ್ ಮಾಡಿದ ಸರಕಾರಿ ಅನುದಾನ. ಯಾವ ಕಚೇರಿಯೂ ಸಮಯಕ್ಕೆ ಸರಿ ತೆರೆಯೋದಿಲ್ಲ. ತೆರೆದರೂ ಸಿಬ್ಬಂದಿ, ನೌಕರರು ಲೇಟ್ ಲತೀಫ್. ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಗ್ರಾಪಂಗಳ ಸಿಬ್ಬಂದಿ ಕೊರತೆ.

ಚುನಾವಣೆ ಕ್ಷೇತ್ರಗಳು: ಗೋಪಾಡಿ, ಬೀಜಾಡಿ, ತಕ್ಕಟ್ಟೆ, ಕುಂಭಾಶಿ, ಬೇಳೂರು, ಕೆದೂರು, ಉಳ್ತೂರು, ಕಾಳಾವರ, ಅಸೋಡು, ವಕ್ವಾಡಿ, ಕೊರ್ಗಿ, ಹೆಸ್ಕತ್ತೂರು.
ಕಾಂಗ್ರೆಸ್ ಬೆಂಬಲಿತ : ಕಾಳಾವರ, ಬೇಳೂರು. (ಕೊರ್ಗಿ-ಮೈತ್ರಿ)
ಬಿಜೆಪಿ ಬೆಂಬಲಿತ : ಗೋಪಾಡಿ, ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ, ಕೆದೂರು,

Leave a Reply

Your email address will not be published. Required fields are marked *

nineteen − six =