ಬೀಜಾಡಿ: ನಾಗಮಂಡಲೋತ್ಸವ ಹಸಿರು ಹೊರೆಕಾಣಿಕೆ ಮೆರವಣಿಗೆ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀರ್ವಾದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.೧೩ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆ ನಡೆಯಿತು.

Call us

Call us

ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಚಾಲನೆ ನೀಡಿ ಶುಭ ಹಾರೈಸಿದರು. ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಪುರಮೆರವಣಿಗೆ ಸಂಚಾಲಕ ರಾಮನಾಯ್ಕ್, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಚಂಡೆವಾದನ, ಬ್ಯಾಂಡ್, ಭಜನೆ, ನಾಮಸಂಕೀರ್ತನೆ ಸೇರಿದಂತೆ ಕಳಸ ಹಿಡಿದ ಮಹಿಳೆಯರು ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಿದವು.

Leave a Reply

Your email address will not be published. Required fields are marked *

four × 3 =