ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ವಕ್ವಾಡಿ ಕನಕ ನಿವಾಸದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ ಗೋಪಾಡಿ ಮಿತ್ರ ಸಂಗಮ ಮತ್ತು ರೋಟರಿ ಸಮುದಾಯ ದಳ ಬೀಜಾಡಿ ಇವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಮೇಲಿನ ಆತ್ಮೀಯತೆಯಿಂದ ನನ್ನನ್ನು ಸನ್ಮಾನಿಸಿ ಗೌರವಿಸಿದ್ದಿರಿ. ಗ್ರಾಮಗಳು ಅಭಿವೃದ್ದಿ ಕಾಣಬೇಕಾದರೆ ಸ್ಥಳೀಯ ಸಂಘ ಸಂಸ್ಥೆಗಳ ಕೊಡುಗೆ ಆಪಾರವಾಗಿರಬೇಕು. ಸಮಾಜಮುಖಿಯಾಗಿ ಸೇವೆ ನೀಡಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆ ಇನ್ನಷ್ಟು ಜನಪರ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಹೆಸರು ಮಾಡಲಿ ಎಂದು ಹೇಳಿದರು.
ಈ ಸಂದರ್ಭ ಮಿತ್ರ ಸಂಗಮ ಗೌರವಧ್ಯಕ್ಷ ವಾದಿರಾಜ್ ಹೆಬ್ಬಾರ್ ಫಲಪುಷ್ಟಗಳೊಂದಿಗೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷ ಚಂದ್ರಶೇಖರ ಬೀಜಾಡಿ, ಕಾರ್ಯದರ್ಶಿ ರಾಜೇಶ್ ಆಚಾರ್, ಬೆಳ್ಳಿ ಹಬ್ಬದ ಸಮಿತಿ ಕಾರ‍್ಯದರ್ಶಿ ಮಂಜುನಾಥ್ ಬೀಜಾಡಿ, ಕೋಶಧಿಕಾರಿ ಬಿ.ಜಿ.ನಾಗರಾಜ್, ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ್ ಬೀಜಾಡಿ, ಮಾಜಿ ಅಧ್ಯಕ್ಷ ಗಿರೀಶ್ ಕೆ.ಎಸ್, ನಾರಾಯಣ ಭಂಡಾರಿ, ಅರುಣ ದೇವಾಡಿಗ, ರಾಜೇಂದ್ರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.