ಬೀಜಾಡಿ ಮಿತ್ರ ಸಂಗಮ ರಜತಮಹೋತ್ಸವ ಸಮಾರಂಭ: ಸಾಧಕರಿಗೆ ಸನ್ಮಾನಿಸಿ ಸಭಾಪತಿ ಬಸವರಾಜ ಹೊರಟ್ಟಿ ಮಾತು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಊರಿನ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಗ್ರಾಮಕ್ಕೆ ನೀಡಿದ ದೊಡ್ಡ ಗೌರವವಾಗಿದೆ. ಇತಂಹ ಪುಣ್ಯಭೂಮಿಯಲ್ಲಿ ಸಾಧಕರ ನಡುವೆ ನಾವಿರುವುದು ದೊಡ್ಡ ಸೌಭಾಗ್ಯವೆನಿಸಿದೆ. ಇಲ್ಲಿನ ಸಾಧಕರು ಹಾಗೂ ಸೇವೆ ಮಾಡುವ ಸಂಸ್ಥೆಯ ಕಾರ್ಯಗಳು ಮಾದರಿಯಾಗಿದೆ. 25 ವರ್ಷಗಳಿಂದ ಗ್ರಾಮದ ಅಭಿವೃದ್ಧಿಗೆ ಹಾಗೂ ಸಮಾಜಕ್ಕೆ ಸೇವೆ ನೀಡುತ್ತಿರುವ ಮಿತ್ರಸಂಗಮದ ಕಾರ್ಯ ಶ್ಲಾಘನೀಯವಾದದ್ದು ಎಂದು ಕನಾ೯ಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Click Here

Call us

Call us

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ಸಮಾರಂಭದ ರಜತಪಥ ನೆರಳು ಬೆಳಿಕಿನ ಸಹಯಾನದ 2ನೇ ದಿನದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

Click here

Click Here

Call us

Visit Now

ಮಕ್ಕಳಲ್ಲಿ ಕೇವಲ ಶಿಕ್ಷಣದ ಗುರಿಯನ್ನು ಇರಿಸದೇ ಸಂಸ್ಕಾರದ ಪಾಠವನ್ನು ಹೇಳಿ ಕೊಡಬೇಕು. ತಂದೆ-ತಾಯಿ ಋಣ, ಸಮಾಜದ ಋಣ, ಶಾಲೆ ಋಣ, ಊರ ಋಣವನ್ನು ಯಾರಿದಂಲೂ ತೀರಿಸಲು ಸಾಧ್ಯವಾಗುವುದಿಲ್ಲ. ನಾವು ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕಾಗಿ ನಾವು ಸೇವೆ ಮಾಡಲೇಬೇಕು. ಇದರಿಂದ ಅದೆಷ್ಟೂ ಮಂದಿ ಬಡವರಿಗೆ ಅಶಕ್ತರಿಗೆ ನೆರವು ನೀಡಿದ ತೃಪ್ತಿಯ ಜತೆಯಲ್ಲಿ ನಮ್ಮ ಸೇವೆಯೂ ಸಾರ್ಥಕಗೊಳ್ಳುತ್ತದೆ ಎಂದರು.

ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆದೂರು ಪ್ರಗತಿಪರ ಕೃಷಿಕ ರಾಮಕೃಷ್ಣ ಬಾಯಿರಿ ಇವರು ವಿಕಲಚೇತನರಿಗೆ ಗಾಲಿಕುಚಿ೯ ವಿತರಿಸಿದರು. ಭರಮಸಾಗರ ಡಿವಿಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರದೀಪ್ ಡಿ.ವಿ.ಎಸ್, ಹೊಟೇಲ್ ಉದ್ಯಮಿ ಕೆ.ಎಚ್.ಮಂಜುನಾಥ್ ದೇವಾಡಿಗ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭ ವಿಶೇಷ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ, ಸಂಸ್ಥೆಯ ವಿಶೇಷ ಸ್ಮರಣ ಸಂಚಿಕೆ ರಜತಪಥ ಬಿಡುಗಡೆ, ವಿಕಲಚೇತನರಿಗೆ ಗಾಲಿಕುಚಿ೯ ವಿತರಣೆ ಹಾಗೂ ಶಾಂತಿಧಾಮ ಪೂರ್ವ ಗುರುಕುಲಕ್ಕೆ ಕಪಾಟು ಹಸ್ತಾಂತರ ಕಾರ್ಯಕ್ರಮಗಳು ನಡೆದವು. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Call us

ವೇದಿಕೆಯಲ್ಲಿ ಮಿತ್ರಸಂಗಮದ ಕಾರ್ಯದಶಿ೯ ರಾಜೇಶ್ ಆಚಾರ್ ಬೀಜಾಡಿ, ರಜತಮಹೋತ್ಸವ ಸಮಿತಿಯ ಕಾಯಾ೯ಧ್ಯಕ್ಷ ಶಂಕರನಾರಾಯಣ ಬಾಯಿರಿ, ಅಧ್ಯಕ್ಷ ದೀಪಾನಂದ ಉಪಾಧ್ಯಾಯ, ಪ್ರಧಾನ ಕಾರ್ಯದಶಿ೯ ಚಂದ್ರ ಬಿ.ಎನ್ ಮತ್ತಿತರರು ಉಪಸ್ಥಿತರಿದ್ದರು.

ಗಾಯಕ ಮಾಧವ ಬೀಜಾಡಿ ಪ್ರಾಥಿ೯ಸಿದರು. ಮಿತ್ರಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ರಜತಮಹೋತ್ಸವ ಸಮಿತಿ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.

Leave a Reply

Your email address will not be published. Required fields are marked *

9 + fourteen =