ಬೀಜಾಡಿ ಮಿತ್ರ ಸಂಗಮ ವಿಂಶತಿ ಸಮಾರೋಪ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಿತ್ರ ಸಂಗಮ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. ಜನಪರ ಜನಪಯೋಗಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ವಿಂಶತಿ ಉತ್ಸವಕ್ಕೆ ಅರ್ಥ ತುಂಬಿದ್ದಾರೆ. ಯುವಕರಿಗೆ ಜಾವಬ್ದಾರಿ ಇದೆ. ಯುವಕರಲ್ಲಿ ಇರುವ ಶಕ್ತಿ ಬೇರೆ ಯಾರಲ್ಲೂ ಇಲ್ಲ.ನಮ್ಮಲ್ಲಿ ಹೆಚ್ಚು ಶಕ್ತಿ ಇದ್ದ ಸಂದರ್ಭದಲ್ಲಿ ಯಾರು ಕಷ್ಟದಲ್ಲಿದ್ದವರಿಗೆ, ಕಣ್ಣಿರಿನಲ್ಲಿದ್ದವರಿಗೆ, ಆಸಹಾಯಕರಿಗೆ ಸಹಾಯ ಮಾಡಬೇಕು. ಆ ಕೆಲಸವನ್ನು ಮಿತ್ರ ಸಂಗಮ ಸಂಸ್ಥೆ ಮಾಡಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

Call us

Call us

ಅವರು ಬೀಜಾಡಿ ಗೋಪಾಡಿ ಮಿತ್ರಸಂಗಮ ವಿಂಶತಿ ಸಮಾರೋಪ ಸಮಾರಂಭದಲ್ಲಿ ಇಪ್ಪತ್ತು ಮಂದಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಧನ, ಹೊಲಿಗೆ ಯಂತ್ರ,ಗಾಲಿ ಕುರ್ಚಿ,ಊರುಗೋಲು ವಿತರಿಸಿ,ವಿಂಶತಿ ದರ್ಶನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯುವಜನ ಮೇಳವನ್ನು ಸಂಘಟಿಸಲು ಯುವಕ ಮಂಡಲಗಳು ಹಿಂದೆಟು ಹಾಕುವ ಸಂದರ್ಭದಲ್ಲಿ ಮಿತ್ರ ಸಂಗಮದವರು ಈ ವರ್ಷ ತಾಲೂಕು ಮಟ್ಟದ ಯುವಜನಮೇಳವನ್ನು ಯಶಸ್ವಿಯಾಗಿ ಸಂಘಟಿಸಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಮಿತ್ರಸಂಗಮದ ಎಲ್ಲಾ ಕಾರ್ಯ ಚಟುವಟಿಕೆ ಇತರರಿಗೆ ಅನುಕರಣೀಯ ಎಂದರು.

Call us

Call us

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಮಿತ್ರಸಂಗಮ ಈ ಭಾಗದ ಜನರ ಹೆಮ್ಮೆಯ ಸಂಕೇತ. ವಿಂಶತಿ ಉತ್ಸವದ ಮೂಲಕ ಸಂಸ್ಥೆಯ ಸದಸ್ಯರು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಸಂಘಟಿಸುವುದರ ಜತೆಗೆ ಧಣಿದವರಿಗೆ, ಆಸಹಾಯಕರಿಗೆ, ವಿದ್ಯಾರ್ಥಿಗಳಿಗೆ ಸಹಾಯ ನೀಡುವುದರ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಯುವಕರು ಒಳ್ಳೆಯ ಮನಸ್ಸಿನಿಂದ ಒಟ್ಟು ಸೇರಿದರೆ ಎನ್ನನ್ನಾದರೂ ಸಾಧಿಸ ಬಹುದು ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾಲೂಕು ಪಂಚಾಯತಿ ಸದಸ್ಯೆ ವೈಲೆಟ್ ಬೆರೆಟ್ಟೋ,ಕುಂದಾಪುರದ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಶಿಕ್ಷಣ ಪ್ರೇಮಿ ಬಿ.ಶೇಷಗಿರಿ ಗೋಟ, ತೆಕ್ಕಟ್ಟೆ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಹೋಟಲ್ ಉದ್ಯಮಿ ಅಚ್ಯುತ ಉಪಾಧ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬೀಜಾಡಿ-ಗೋಪಾಡಿ ಮಿತ್ರ ಸಂಗಮ ಕೋಶಾಧಿಕಾರಿ ಶಂಕರನಾರಾಯಣ ಬಾಯರಿ, ವಿಂಶತಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಉಪಾಧ್ಯಕ್ಷರಾದ ಉಪೇಂದ್ರ ಬಿಳಿಯ, ಗಣೇಶ್ ಬೀಜಾಡಿ, ಕೊಶಾಧಿಕಾರಿ ಸೌರಭ ರಾಜೀವ ಮರಕಾಲ ಮೊದಲಾದವರು ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಬಿ. ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ವಿಂಶತಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕ ಮಾತನಾಡಿದರು. ಮಿತ್ರ ಸಂಗಮದ ಉಪಾಧ್ಯಕ್ಷ ಗಿರೀಶ್ ಕೆ.ಎಸ್ ಪ್ರತಿಭಾ ಪುರಸ್ಕಾರದ ಪಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೇವಾಡಿಗ ವರದಿ, ವಿಂಶತಿ ಮಹೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರ ಬಿ.ಎನ್. ಸಂದೇಶ, ಶ್ರೀಕಾಂತ್ ಭಟ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಕೆ.ಎಸ್.ಮಂಜಿನಾಥ್ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಪರವಾಗಿ ಮಾತನಾಡಿದರು. ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು. ಮಿತ್ರ ಸಂಗಮ ಅಧ್ಯಕ್ಷ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್. ವಂದಿಸದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು,ಕೆ.ನವೀನ್‌ಚಂದ್ರ ಕೊಪ್ಪ ನೇತೃತ್ವದ ಸಂಗೀತ ರಸಮಂಜರಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕ್ರೇಸಿ ಗಯ್ಸ್ ತಂಡದವರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಜರುಗಿತು.

ಸಮಾರಂಭದಲ್ಲಿ 20 ಮಂದಿ ಎಲೆಮರೆಯ ಸ್ಥಳೀಯ ಸಾಧಕರಾದ ನಿವೃತ್ತ ಶಿಕ್ಷಕ,ಯಕ್ಷಗಾನ ಕಲಾವಿದ ಗಣಪಯ್ಯ ಚಡಗ, ನಾಟಕ ರಚನೆ ಮತ್ತು ನಿರ್ದೇಶಕಸಂಜೀವ ಕದ್ರಿಕಟ್ಟು,ಹಿರಿಯ ರಿಕ್ಷಾ ಚಾಲಕ ರಿಕ್ಷಾ ಹೆರಿಯಣ್ಣ, ಕ್ಷೌರಿಕ ನಾರಾಯಣ ಭಂಡಾರಿ,ಜಾತ್ರ್ರೆಯ ಸಂದರ್ಭದಲ್ಲಿ ದೇವರನ್ನ ಹೊರುವರಾಘವೇಂದ್ರ ಉಡುಪ, ಚಿತ್ರ ಕಲಾವಿದ ಸಂತೋಷ್ ಬಳ್ಕೂರು,ಹೈನುಗಾರ,ನಿವೃತ್ತ ಬ್ಯಾಂಕ್ ಉದ್ಯೋಗಿ ಅಣ್ಣಪ್ಪ ಶೇರೇಗಾರ್, ಕೃಷಿಕರಾಜು ಮರಕಾಲ ಪಡುಚಾವಡಿಬೆಟ್ಟು, ಕುಣಿತ ಭಜನೆಯ ದಿನೇಶ್ ಚಾತ್ರಬೆಟ್ಟು,ಮಾಜಿ ಸೈನಿಕ ರಾಮಚಂದ್ರ ಗಾಣಿಗ, ಆರ್ಟಿಸ್ಟ್ ವೆಂಕಟೇಶ್ ಆಚಾರ್ಯ,ವಾದ್ಯ ಕಲಾವಿದ ಸಂಜೀವ ದೇವಾಡಿಗ, ಮನೆ ಮನೆ ತಿರುಗುವ ಬಳೆಗಾರ್ತಿ ಕಾಮಾಕ್ಷಿ ಜೋಗಿ, ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ, ಕೃಷಿ ಕೆಲಸಕ್ಕೆ ಕೂಲಿಯಾಳು ಒದಗಿಸುವ ನಾರಾಯಣ ಮೊಗವೀರ,ತಾಂತ್ರಿಕ ತಜ್ಞ ಚಂದ್ರಶೇಖರ ಆಚಾರ್ಯ,ನಾಟಿ ವೈದ್ಯೆ ಸರೋಜಾ ಕುಂದರ್, ಲೈನ್‌ಮ್ಯಾನ್ ಅಭಿಲಾಷ ಬಿ.ಎ, ಅಂಗನವಾಡಿ ಶಿಕ್ಷಕಿ ಸುಜಾತಾ, ಯುವ ಗಾಯಕಿ ಕು.ಸುಶ್ಮಾ ಮಂಜುನಾಥ್ ಆಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

two + 17 =