ಬೀಜಾಡಿ: ಶಿಕ್ಷಕ ಪದ್ಮನಾಭ ಅಡಿಗರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬೀಜಾಡಿ ಮೂಡು ಶಾಲೆಯ ಶಿಕ್ಷಕ ಪದ್ಮನಾಭ ಅಡಿಗರಿಗೆ ವಯೋನಿವೃತ್ತಿ ಹಿನ್ನಲೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಶಾಲಾ ವೇದಿಕೆಯಲ್ಲಿ ಜರುಗಿತು.

ಶ್ರೀ ಪದ್ಮನಾಭ ಅಡಿಗರ ಶಿಕ್ಷಕ ಸಹೊದ್ಯೋಗಿಗಳು ಹಾಗೂ ಗ್ರಾಮಸ್ಥರು ಚಿನ್ನದ ಉಂಗುರವನ್ನು ಕಾಣಿಕೆಯಾಗಿ ನೀಡಿ , ಫಲಪುಷ್ಪ ಸಮರ್ಪಿಸಿ ಸನ್ಮಾನಿಸಿದರು. ಪದ್ಮನಾಭ ಅಡಿಗರ ಗುರುಗಳಾದ ದಯಾನಂದ ರಾವ್ ಸನ್ಮಾನ ಕಾರ್ಯ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಗಣೇಶ್ ಪುತ್ರನ್, ನಿವೃತ್ತ ಪದವೀಧರ ಶಿಕ್ಷಕ ಮೊಹಮ್ಮದ್ ರಫಿಕ್, ನಿವೃತ್ತ ಮುಖ್ಯೋಪಾಧ್ಯಾಯ ರತ್ನಾಕರ ಶೆಟ್ಟಿ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಸೂರಪ್ಪ ಹೆಗ್ಡೆ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಲಕ್ಷ್ಮಣ ಭಟ್, ವಿಶ್ವನಾಥ ಹತ್ವಾರ್, ಶಿಕ್ಷಣ ಇಲಾಖೆಯ ಮಹೇಶ್ಚಂದ್ರ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಶ್ಯಾಮಲ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಭಟ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು. ಈ ಸಂದರ್ಭ ಪುಷ್ಪ ಅಡಿಗರು ಉಪಸ್ಥಿತರಿದ್ದರು.

ಶಿಕ್ಷಕ ಪ್ರವೀಣ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಭಟ್ ಸ್ವಾಗತಿಸಿ, ನಳಿನಿ ಟೀಚರ್ ವಂದಿಸಿದರು.

 

Leave a Reply

Your email address will not be published. Required fields are marked *

1 × one =