ಬೀಡಿ ವರ್ಕರ್ಸ್ ಯೂನಿಯನ್ ವಾರ್ಷಿಕ ಮಹಾಸಭೆ

Call us

Call us

ಕುಂದಾಪುರ: ಸಿಐಟಿಯುಗೆ ಸಂಯೋಜಿಸಲ್ಪಟ್ಟ ಕುಂದಾಪುರ ಬೀಡಿ ವರ್ಕರ್ಸ್ ಯೂನಿಯನ್ ಇದರ 22ನೇ ವಾರ್ಷಿಕ ಮಹಾಸಭೆಯ ಇತ್ತಿಚಿಗೆ ಕುಂದಾಪುರ ಕಾರ್ಮಿಕ ಭವನದಲ್ಲಿ ಜರಗಿತು.

Click Here

Call us

Call us

ಬೀಡಿ ವರ್ಕರ್ಸ್ ಯೂನಿಯನ್ ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕೀಸ್‌ರವರು ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಬೀಡಿ ಕೈಗಾರಿಕೆ ಬಿಕ್ಕಟ್ಟಿನಲ್ಲಿದೆ. ಜಗತ್ತಿನಾದ್ಯಂತ ತಂಬಾಕು ನಿಷೇದದಿಂದಾಗಿ ಭಾರತದಲ್ಲಿ 1.5 ಕೋಟಿ ಬೀಡಿ ಕೆಲಸಗಾರರು ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದಲಿ ಕೆಲಸ ಸೃಷ್ಠ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ನುಂಗಿ ಹಾಕಲು ಬೀಡಿ ಮಾಲಕರು ಮತ್ತು ಸರಕಾರಗಳು ಪ್ರಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Click here

Click Here

Call us

Visit Now

ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಇವರು ಶುಭಕೋರಿ ಮಾತನಾಡಿದರು. ಏಪ್ರಿಲ್ 2015 ರಿಂದ ಬೀಡಿ ಕಾರ್ಮಿಕರಿಗೆ 1000 ಬೀಡಿಗೆ ಕೊಡಬೇಕಾದ ರೂ. 12.75 ರಂತೆ ತುಟ್ಟಿಭತ್ಯೆಯನ್ನು ಮೂರು ವರ್ಷಗಳ ಮಾಲಕರ ಪರವಾಗಿ ರಾಜ್ಯ ಸರಕಾರ ತಡೆ ಹಿಡಿದು ಬೀಡಿ ಕಾರ್ಮಿಕರಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು.

ಬೀಡಿ ವರ್ಕರ್ಸ್ ಯೂನಿಯನ್ ಕುಂದಾಪುರ ತಾಲೂಕು ಸಮಿತಿಗೆ ಪದಾಧಿಕಾರಿಗಳಾಗಿ ಮಹಾಬಲ ವಡೇರ ಹೋಬಳಿ (ಅಧ್ಯಕ್ಷ) ಬಲ್ಕೀಸ್ (ಪ್ರಧಾನ ಕಾರ್ಯದರ್ಶಿ) ಗಿರಿಜಾ (ಕೋಶಾಧಿಕಾರಿ) ಶಾರದಾ, ಪುಷ್ಪಾ ಪಾರ್ವತಿ ಬಸ್ರೂರು, ಗುಲಾಬಿ (ಉಪಾಧ್ಯಕ್ಷರು) ಕಮಲ, ಸುಶೀಲ ನೆಲ್ಲಿಕಟ್ಟೆ, ಪ್ರೇಮ ತ್ರಾಸಿ, ಜಲಜಾ ನೇರಳಕಟ್ಟೆ, (ಜೊತೆ ಕಾರ್ಯದರ್ಶಿಗಳು) ಸೇರಿದಂತೆ ೪೭ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಹಾಬಲ ವಡೇರ ಹೋಬಳಿ ಚಟುವಟಿಕೆ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

three × two =