ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೇಸಿಗೆ ಶಿಬಿರಗಳು ಮಕ್ಕಳ ಕೌಶಲ್ಯ ಅಭಿವೃದ್ದಿ ಹಾಗೂ ಸೃಜನಶೀಲತೆಯ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ಕೆ.ಎಸ್. ಮೆಡಿಕಲ್ ಕಾಲೇಜಿನ ಪ್ರೊ. ಡಾ. ರಶ್ಮಿ ಹೇಳಿದರು.
ಕೋಟೇಶ್ವರ ಕೆನರಾ ಕಿಡ್ಸ್ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೇಂದ್ರ ಕುಮಾರ್ ಕೋಟ, ಸವಿತಾ ಐತಾಳ್ ಹಾಗೂ ಕೆನರಾ ಕಿಡ್ಸ್ ಸಂಚಾಲಕಿ ವಿನಂತಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.